ಮಾಧ್ಯಮಗಳಲ್ಲಿ ಎಷ್ಟೇ ವರದಿಯಾಗಿದ್ದರೂ, ಜನ ಜಾಗೃತಿ ಇನ್ನೂ ಮೂಡಿಲ್ಲವೆಂಬುದಕ್ಕೆ ಸಾಕಷ್ಟು ಪುರಾವೆ ಸಿಗುತ್ತಿದೆ. ಬ್ಲೂವೇಲ್ ಎಂಬ ಹೆಸರಿನಲ್ಲಿ ಈಗ ಸುದ್ದಿ-ಸದ್ದು ಆಗುತ್ತಿರುವುದು ಒಂದು ‘ಗೇಮ್’ ಎಂಬುದು ದಿಟವಾದರೂ, ಇದು ಡೌನ್‌ಲೋಡ್ ಮಾಡಿಕೊಂಡು ಆಡುವಂತಹಾ ಆಟ ಅಲ್ಲವೇ ಅಲ್ಲ. ಆನ್‌ಲೈನ್‌ನಲ್ಲಿರುವಾಗ, ಮಾನಸಿಕವಾಗಿ ಕುಗ್ಗಿರುವವರನ್ನೇ ಗುರಿಯಾಗಿಟ್ಟುಕೊಂಡು, ಅವರನ್ನು ಪರಿಚಯ ಮಾಡಿಕೊಂಡು, ಬಳಿಕ ಫೋನ್, ಮೆಸೇಜ್ ಮೂಲಕ ಸಂಪರ್ಕಿಸಿ ಆಟ ಆಡಿಸುವ, ಕೊನೆಗೆ ಆತ್ಮಹತ್ಯೆಗೆ ಪ್ರೇರೇಪಿಸುವ ಕೊಲ್ಲುವ ಆಟ. ಬ್ಲೂವೇಲ್ ಎಂಬುದು ಆತ್ಮಹತ್ಯೆಯ ಅಥವಾ ಸಾವಿನ ಆಟ ಅಂತಲೂ ಕರೆಯಬಹುದು. ‘ನಿಷ್ಪ್ರಯೋಜಕರು ಜಗತ್ತಿನಲ್ಲಿರಬಾರದು’ ಎಂಬ ಕಾರಣಕ್ಕೇ ಬ್ಲೂವೇಲ್ ಎಂಬ ಆನ್‌ಲೈನ್ ಸಾವಿನಾಟ ಸೃಷ್ಟಿಸಿದ್ದೇನೆ ಅಂತ ಅದನ್ನು ಪರಿಚಯಿಸಿದ ವ್ಯಕ್ತಿ ಹೇಳಿಕೊಂಡಿದ್ದಾನೆ. ನೆನಪಿಡಿ.
ಇವನ್ನೂ ನೋಡಿ
2015 ಅಧಿಕ ವರ್ಷ ಅಲ್ಲ, ಅಧಿಕ ಕ್ಷಣ!
ಬೆಂಗಳೂರು: ಕ್ಷಣ ಕ್ಷಣವೂ ಅಮೂಲ್ಯ. ಅಧಿಕ ವರ್ಷದಂತೆಯೇ 2015ನ್ನು ಅಧಿಕ ಸೆಕೆಂಡಿನ ವರ್ಷ ಎನ್ನಬಹುದು. ಅಂದರೆ ಈ ವರ್ಷದ ಸಮಯಕ್ಕೆ ಒಂದು ಸೆಕೆಂಡು ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ. ಇದರಿಂದಾಗಿ 2015ರ ಜೂನ್ 30ರ ಮಧ್ಯರಾತ್ರಿ...