ಫೇಸ್‌ಬುಕ್ ಮೂಲಕವೇ ರಕ್ತದಾನಿಗಳಾಗುವ ಅವಕಾಶ ಇದೆ ಎಂಬ ಅಂಶ ಹೆಚ್ಚಿನವರಿಗೆ ತಿಳಿದಿದೆ. ನೀವು ಲಾಗಿನ್ ಆದಾಗಲೇ ಕೆಲವೊಮ್ಮೆ ನೀವೂ ರಕ್ತದಾನ ಮಾಡಿ ಎಂಬ ಸಂದೇಶದೊಂದಿಗೆ ಅದರ ಲಿಂಕ್ ಸಿಗುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಫೋನ್ ನಂಬರ್ ಹಾಗೂ ರಕ್ತದ ಗುಂಪು ದಾಖಲಿಸಿದರೆ, ಆ ಪ್ರದೇಶದಲ್ಲಿ ಯಾರಿಗಾದರೂ ರಕ್ತದ ಅವಶ್ಯಕತೆಯಿದ್ದರೆ ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸಲಾಗುತ್ತದೆ. ಈ ಫೇಸ್‌ಬುಕ್ ರಕ್ತದಾನಿಗಳ ಗುಂಪಿನಲ್ಲಿ ಈಗಾಗಲೇ 60 ಲಕ್ಷ ಮಂದಿ ಭಾರತೀಯರು ನೋಂದಾಯಿಸಿಕೊಂಡಿದ್ದಾರೆ ಎಂದು ಇತ್ತೀಚೆಗೆ ಫೇಸ್‌ಬುಕ್ ಪ್ರಕಟಿಸಿದೆ. ಈ ಯೋಜನೆಯಲ್ಲಿ ಹಲವಾರು ಟ್ರಸ್ಟ್‌ಗಳು, ಎನ್‌ಜಿಒಗಳು ಕೈಜೋಡಿಸಿದ್ದು, ಅಗತ್ಯವಿದ್ದವರಿಗೆ ರಕ್ತ ದೊರೆಯುವ ವ್ಯವಸ್ಥೆ ಇದೆ.
ಇವನ್ನೂ ನೋಡಿ
ಓ ನನ್ನ ಚೇತನ….!
ಇಂದು ನಾನೇನಾಗಿದ್ದೇನೆಯೋ... ಅದಕ್ಕೆ ಕಾರಣವಾದ, ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಿನ್ನೊಂದಿಗಿನ ಒಡನಾಟವನ್ನು ನೆನಪಿಸುತ್ತಿರುವ O my dear dear....! ಅಂದು ಒಂಟಿತನ ಕಾಡುತ್ತಿದ್ದಾಗ, ಚಿಂತೆಯಲ್ಲಿ ಸಿಲುಕಿದಾಗ, ಬೇಸರ ಕಾಡಿದಾಗ, ಮನ ಮುದುಡಿದಾಗ ಉರಿಯುತ್ತಿರುವ ಬೆಂಕಿಗೆ...