ತೀರಾ ಇತ್ತೀಚಿನ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಎಸ್ಸೆಮ್ಮೆಸ್ (Messages) ಆ್ಯಪ್‌ನಲ್ಲಿ ಹೆಚ್ಚಿನವರು ಹೊಸದೊಂದು ಆಯ್ಕೆಯನ್ನು ನೋಡಿರಬಹುದು. ವಾಟ್ಸ್ಆ್ಯಪ್ ಸಂದೇಶಗಳನ್ನು ಯಾವ ರೀತಿ ನಾವು ಕಂಪ್ಯೂಟರಿಗೆ ಸಂಪರ್ಕಿಸಿ, ಬ್ರೌಸರಿನಲ್ಲಿ ನೋಡಬಹುದೋ, ಅದೇ ರೀತಿ ಈ ಎಸ್ಸೆಮ್ಮೆಸ್ ಸಂದೇಶಗಳನ್ನೂ ನೋಡಬಹುದು. ಮತ್ತು ಕಂಪ್ಯೂಟರಿನಲ್ಲೇ ಸಂದೇಶಗಳನ್ನು ಟೈಪ್ ಮಾಡಿ ಕಳುಹಿಸಬಹುದು ಅಥವಾ ಓದಬಹುದು. ಇದಕ್ಕೆ ನೀವು ಮಾಡಬೇಕಾದುದಿಷ್ಟೇ. ನಿಮ್ಮ ಮೆಸೇಜ್ ಆ್ಯಪ್‌ನ ಸೆಟ್ಟಿಂಗ್ಸ್‌ಗೆ ಹೋಗಿ, Messages For Web ಅಂತ ಕ್ಲಿಕ್ ಮಾಡಿ, ಕಂಪ್ಯೂಟರಿನ ಬ್ರೌಸರಿನಲ್ಲಿ https://messages.android.com ಎಂಬ ತಾಣಕ್ಕೆ ಹೋಗಿ, ಅದರ ಎದುರು ಮೊಬೈಲ್ ಹಿಡಿದು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ. ಪರಸ್ಪರ ಸಂಪರ್ಕವಾಗುತ್ತದೆ. ಕಂಪ್ಯೂಟರಿನಿಂದಲೇ ಸಂದೇಶಗಳನ್ನು ನಿಭಾಯಿಸಬಹುದು. ನೆನಪಿಡಿ, ಇದಕ್ಕೆ ಇಂಟರ್ನೆಟ್ ಸಂಪರ್ಕ ಆನ್ ಇರಬೇಕಾಗುತ್ತದೆ.
ಇವನ್ನೂ ನೋಡಿ
WhatsApp ಗ್ರೂಪ್ಗೆ ಆ್ಯಡ್ಮಿನ್ ಅಂಕುಶ; ಬರುತ್ತಿದೆ ಹಣ ಪಾವತಿ ಸೇವೆ
ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗುತ್ತಿರುವ ವಾಟ್ಸ್ಆ್ಯಪ್ ಎಂಬ ಕಿರು ಮೆಸೇಜಿಂಗ್ ಸೇವೆಯಲ್ಲೀಗ ಎಲ್ಲಿ ಹೋದರೂ ಗ್ರೂಪುಗಳದ್ದೇ ಸದ್ದು. ಅವರವರ ಆಸಕ್ತಿಗೆ, ಕಚೇರಿಗೆ, ಊರಿಗೆ, ಕೆಲಸಕ್ಕೆ, ಕುಟುಂಬಕ್ಕೆ... ಸಂಬಂಧಪಟ್ಟ ಗ್ರೂಪುಗಳಲ್ಲಿ ಬರುವ ಸಂದೇಶಗಳ ಮಹಾಪೂರ....