ಕಂಪ್ಯೂಟರ್ ಹಾಗೂ ಮೊಬೈಲ್ ಮುಂತಾದ ಸಾಧನಗಳನ್ನು ಬಳಸುತ್ತಿರುವವರಿಗೆ ಕೆಲವೊಂದು ಇಂಗ್ಲಿಷ್ ಪದಗಳ ಅರ್ಥ ತಿಳಿಯುವ ತುಡಿತ ಇರುತ್ತದೆ. ರ‍್ಯಾಮ್ ಅಂದರೇನು, ನೆಟ್ ನ್ಯೂಟ್ರಾಲಿಟಿ, ಮೆಗಾಬಿಟ್, ಕ್ಲಿಪ್ ಬೋರ್ಡ್, ಎಫ್‌ಟಿಪಿ, ಬಗ್, ಹಾರ್ಡ್ ಡಿಸ್ಕ್, ವೈರಸ್ ಮುಂತಾದವುಗಳ ಅರ್ಥವೇನು ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಲು epada.in ಎಂಬ ವೆಬ್ ತಾಣ ಈಗ ಲೋಕಾರ್ಪಣೆಗೊಂಡಿದೆ. ಕಂಪ್ಯೂಟರ್ ತಂತ್ರಜ್ಞ ಟಿ.ಜಿ.ಶ್ರೀನಿಧಿ ಅವರು ಇತ್ತೀಚೆಗೆ ಮಾಹಿತಿ ತಂತ್ರಜ್ಞಾನದಲ್ಲಿ ಬಳಕೆಯಾಗುವ ಪದಗಳ ಅರ್ಥವನ್ನು ವಿವರಿಸುವ ‘ಪದ ವಿವರಣ ಕೋಶ’ ಎಂಬ ಕೃತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ತಜ್ಞರ ನೆರವಿನೊಂದಿಗೆ ರಚಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕುರಿತು ತಿಳಿದುಕೊಳ್ಳಲು ಆಸಕ್ತಿ ಇರುವವರಿಗೆ ಇದು ಅತ್ಯಮೂಲ್ಯ ಕೃತಿ. ಅದನ್ನು ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ. 342 ಪುಟಗಳ ಈ ಪುಸ್ತಕದ ಅಂಶಗಳೆಲ್ಲವೂ ಈ ವೆಬ್‌ನಲ್ಲಿ ಹಾಗೂ ಪುಸ್ತಕದ ಪಿಡಿಎಫ್ ರೂಪವೂ ಉಚಿತವಾಗಿ ಲಭ್ಯವಿದೆ.
ಇವನ್ನೂ ನೋಡಿ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಈ ಬುದ್ಧಿಮತ್ತೆ ಕೃತಕವಲ್ಲ!
ಯಂತ್ರಗಳೂ ಆಲೋಚಿಸಬಲ್ಲವೇ?ಈ ಪ್ರಶ್ನೆಗೆ ಉತ್ತರವಾಗಿ ರೂಪುಗೊಂಡಿದ್ದೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ AI. ಕಂಪ್ಯೂಟರ್ ವಿಜ್ಞಾನದ ವೈವಿಧ್ಯಮಯ ವಿಭಾಗಗಳಲ್ಲಿ AI ಕೂಡ ಒಂದು. ಇಂಗ್ಲಿಷಿನಲ್ಲಿ ಇದನ್ನು ಆರ್ಟಿಫಿಶಿಯಲ್...



