ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಸಾಕಷ್ಟು ಆ್ಯಪ್‌ಗಳಿರುತ್ತವೆ ಮತ್ತು ಕಾಲ ಕಾಲಕ್ಕೆ ಅವುಗಳಲ್ಲಿ ಹೊಸ ವೈಶಿಷ್ಟ್ಯಗಳು, ಭದ್ರತೆ ಒಳಗೊಂಡ ಪರಿಷ್ಕೃತ ಆವೃತ್ತಿಗಳು ಲಭ್ಯವಾಗುತ್ತವೆ. ಇಂಟರ್ನೆಟ್ ಸಂಪರ್ಕಗೊಂಡಾಗ ನಿರ್ದಿಷ್ಟ ‘ಆ್ಯಪ್‌ಗೆ ಅಪ್‌ಡೇಟ್‌ಗಳು ಲಭ್ಯ ಇವೆ’ ಎಂಬ ನೋಟಿಫಿಕೇಶನ್ ಬರುತ್ತದೆ. ನಿಮ್ಮಲ್ಲಿ ಅನ್‌ಲಿಮಿಟೆಡ್ ಡೇಟಾ (ಇಂಟರ್ನೆಟ್) ಪ್ಯಾಕ್ ಇದ್ದರೆ ತೊಂದರೆಯಿಲ್ಲ. ಆದರೆ ಸೀಮಿತ ನೆಟ್ ಪ್ಯಾಕ್ ಇದ್ದರೆ ಅವುಗಳು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗದಂತೆ ಮತ್ತು ನಮಗೆ ಬೇಕಾದಾಗಲಷ್ಟೇ ಇಲ್ಲವೇ ವೈಫೈ ಮೂಲಕ ಮಾತ್ರ ಅಪ್‌ಡೇಟ್ ಮಾಡಿಕೊಳ್ಳುವಂತೆ ಹೊಂದಿಸಿಕೊಳ್ಳಬಹುದು. ಇದಕ್ಕೆ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಮೇಲ್ಭಾಗದಲ್ಲಿ ಮೂರು ಗೆರೆಗಳಿರುವ ಮೆನು ಐಕಾನ್ ಸ್ಪರ್ಶಿಸಿ, ಕೆಳಗೆ ಸೆಟ್ಟಿಂಗ್ಸ್ ಎಂದಿರುವಲ್ಲಿ ಕ್ಲಿಕ್ ಮಾಡಿ. Auto Update Apps ಎಂದಿರುತ್ತದೆ ಒತ್ತಿ, ನಿಮಗೆ ಬೇಕಾದ ಆಯ್ಕೆಗಳನ್ನು ಹೊಂದಿಸಿಕೊಳ್ಳಿ.
ಇವನ್ನೂ ನೋಡಿ
ಟೆಕ್ಟಾನಿಕ್: ಕಂಪ್ಯೂಟರಿನಲ್ಲಿ ಎಸ್ಸೆಮ್ಮೆಸ್
ತೀರಾ ಇತ್ತೀಚಿನ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಎಸ್ಸೆಮ್ಮೆಸ್ (Messages) ಆ್ಯಪ್ನಲ್ಲಿ ಹೆಚ್ಚಿನವರು ಹೊಸದೊಂದು ಆಯ್ಕೆಯನ್ನು ನೋಡಿರಬಹುದು. ವಾಟ್ಸ್ಆ್ಯಪ್ ಸಂದೇಶಗಳನ್ನು ಯಾವ ರೀತಿ ನಾವು ಕಂಪ್ಯೂಟರಿಗೆ ಸಂಪರ್ಕಿಸಿ, ಬ್ರೌಸರಿನಲ್ಲಿ ನೋಡಬಹುದೋ, ಅದೇ ರೀತಿ ಈ...