ಕಂಪ್ಯೂಟರುಗಳಲ್ಲಿ ಕೆಲಸ ಮಾಡುತ್ತಿರುವಾಗ, ಯಾವುದೇ ವಿಷಯದ ಸ್ಕ್ರೀನ್ ಶಾಟ್ (ಸ್ಕ್ರೀನ್‌ನಲ್ಲಿ ಕಾಣಿಸುವ ವಿಷಯದ ಚಿತ್ರ) ಬೇಕಿದ್ದರೆ, ಕೀಬೋರ್ಡ್‌ನಲ್ಲಿ PrntScr ಎಂಬ ಬಟನ್ ಒತ್ತಿ, ಅದನ್ನು ಯಾವುದೇ ಫೋಟೋ ಎಡಿಟಿಂಗ್ ಟೂಲ್‌ಗೆ (ಉದಾ. ಪೇಂಟ್‌ಬ್ರಶ್) ಪೇಸ್ಟ್ ಮಾಡಿ, ಸೇವ್ ಮಾಡಲಾಗುತ್ತದೆ. ವಿಂಡೋಸ್ ವಿಸ್ತಾ ಹಾಗೂ ಮುಂದಿನ ಆವೃತ್ತಿಗಳಲ್ಲಿ ಮತ್ತೊಂದು ಸುಲಭ ಟೂಲ್ ಇದೆ. ಅದುವೇ Snipping Tool. ವಿಂಡೋಸ್ ಬಟನ್ ಒತ್ತಿದಾಗ, Search Programs and files ಎಂಬ ಬಾಕ್ಸ್‌ನಲ್ಲಿ Snipping Tool ಅಂತ ಟೈಪ್ ಮಾಡಿದರೆ ಆಯಿತು. ಓಪನ್ ಮಾಡಿ ಚಿತ್ರ ಬೇಕಾದ ಜಾಗವನ್ನು ಸೆಲೆಕ್ಟ್ ಮಾಡಿದರೆ, ಸ್ವಯಂ ಆಗಿ ಕಟ್ ಆಗುತ್ತದೆ. ಸೇವ್ ಮಾಡಿದರೆ ಸ್ಕ್ರೀನ್‌ಶಾಟ್ ಸಿದ್ಧ.
ಇವನ್ನೂ ನೋಡಿ
Sonia’s Circus Company
Sonia Gandhi confirmed her intention by saying "I am not here to get personal benefit from politics"! Ofcourse, she is right. She does...