ಸ್ಮಾರ್ಟ್ ಫೋನ್‌ನಲ್ಲಿ ಆ್ಯಪ್ ಮೂಲಕ ಫೇಸ್‌ಬುಕ್ ಜಾಲಾಡುವವರು ಇತ್ತೀಚೆಗೊಂದು ವಿದ್ಯಮಾನ ಗಮನಿಸಿದ್ದಿರಬಹುದು. ಕೆಳಗೆ ಸ್ಕ್ರಾಲ್ ಮಾಡುತ್ತಿದ್ದಂತೆ ವೀಡಿಯೋಗಳೇ ತೀರಾ ಅತಿ ಅನ್ನಿಸುವಷ್ಟು ಗೋಚರಿಸುತ್ತವೆ ಮತ್ತು ಅವುಗಳು ಪ್ಲೇ ಆಗುತ್ತಾ ನಿಮ್ಮ ಇಂಟರ್ನೆಟ್ ಪ್ಯಾಕನ್ನೂ ಕಬಳಿಸಿಬಿಡುತ್ತವೆ. ಈ ವೀಡಿಯೋಗಳ ಹಾವಳಿ ತಪ್ಪಿಸಲು ಮತ್ತು ಡೇಟಾ ಪ್ಯಾಕ್ ಉಳಿಸಲು ಹೀಗೆ ಮಾಡಿ. FB ಆ್ಯಪ್ ತೆರೆದು ಸೆಟ್ಟಿಂಗ್ಸ್‌ಗೆ ಹೋಗಿ, ‘ಅಕೌಂಟ್ ಸೆಟ್ಟಿಂಗ್ಸ್’ ಅಂತ ಕ್ಲಿಕ್ ಮಾಡಿ. ‘ವೀಡಿಯೋಸ್ ಆ್ಯಂಡ್ ಫೋಟೋಸ್’ ಕ್ಲಿಕ್ ಮಾಡಿ, ನಾಲ್ಕು ಆಯ್ಕೆಗಳು ಗೋಚರಿಸುತ್ತವೆ. ಅದರಲ್ಲಿ Never Auto-Play Videos ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಆಗ ನಿಮಗೆ ವೀಡಿಯೋಗಳೇ ಕಾಣಿಸುವ ಬದಲು ನಿಮಗೆ ಬೇಕಾದ ಅಪ್‌ಡೇಟ್‌ಗಳೂ ಸುಲಭವಾಗಿ ಕಾಣಿಸುತ್ತವೆ.
ಇವನ್ನೂ ನೋಡಿ
Captcha ಎಂದರೇನು? ಇದನ್ನೇಕೆ ನಾವು ಬಳಸಬೇಕು?
ಗೂಗಲ್ ಅಥವಾ ಸಾಮಾಜಿಕ ಜಾಲ ತಾಣಗಳ ಖಾತೆ ತೆರೆಯುವ ಸಂದರ್ಭ, ಬ್ಯಾಂಕಿಂಗ್ ತಾಣಗಳಿಗೆ ಲಾಗಿನ್ ಮಾಡುವಾಗ ಅಥವಾ ಯಾವುದಾದರೂ ಜಾಲತಾಣಗಳಿಗೆ ಕಾಮೆಂಟ್ ಹಾಕುವ ಸಂದರ್ಭದಲ್ಲಿ ನೀವು ಈ Captcha ಎಂಬ...