ನಿಮ್ಮ ಆಂಡ್ರಾಯ್ಡ್ ಫೋನ್ ಎಲ್ಲಿಟ್ಟಿರಿ ಅಂತ ಮರೆತು ಹೋಯಿತೇ? ಎಷ್ಟು ಹುಡುಕಿದರೂ ಸಿಗುತ್ತಿಲ್ಲವೇ? ಚಿಂತಿಸಬೇಡಿ, ಕಂಪ್ಯೂಟರ್ ಆನ್ ಮಾಡಿ, ಇಂಟರ್ನೆಟ್ ಸಂಪರ್ಕಿಸಿ, ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಹುಡುಕಿ! ಹೌದು, ಗೂಗಲ್ ಸರ್ಚ್ ಎಂಜಿನ್‌ನಲ್ಲಿ Find My Phone ಅಂತ ಬರೆದು ಎಂಟರ್ ಕೊಡಿ. ಲಾಗ್ ಇನ್ ಆಗಲು ಹೇಳುತ್ತದೆ. ಕಣ್ಣಿನಿಂದ ಮರೆಯಾದ ಆಂಡ್ರಾಯ್ಡ್ ಫೋನ್ ಜತೆಗೆ ಮೇಳೈಸಿದ ಇಮೇಲ್ ಮೂಲಕ ಲಾಗಿನ್ ಆಗಿ, ಬಲ ಮೇಲ್ಭಾಗದಲ್ಲಿ ಯಾವ ಫೋನ್ ಎಂಬುದನ್ನು (ಹಲವು ಆಂಡ್ರಾಯ್ಡ್ ಫೋನ್‌ಗಳು ಒಂದೇ ಇಮೇಲ್ ಐಡಿಗೆ ಸಂಪರ್ಕಗೊಂಡಿದ್ದರೆ) ಆಯ್ಕೆ ಮಾಡಿ, Ring ಎಂಬ ಬಟನ್ ಒತ್ತಿ. ಎಲ್ಲೇ ಇದ್ದರೂ ಕಿರುಚಿಕೊಳ್ಳುತ್ತದೆ.
ಇವನ್ನೂ ನೋಡಿ
ಅದಕ್ಕಿಲ್ಲದ ಅವಸರ ಇದಕ್ಕೇಕೆ?
ಹೀಗೇ ಯೋಚಿಸ್ತಾ ಕೂತಿದ್ದಾಗ ಹೊಳೆದದ್ದು:
ಪೊಲೀಸರು, ಕೇಂದ್ರ ಸರಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರಗಳು ಐದಾರು ಜನರ ಸಾವಿಗೆ ಕಾರಣವಾಗಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯನ್ನು ಮಾಡುತ್ತಿರುವ ರೀತಿಯಲ್ಲಿಯೇ, ನೂರಾರು ಜೀವಗಳನ್ನು ಬಲಿತೆಗೆದುಕೊಂಡ ಅಹಮದಾಬಾದ್,...