ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲ ತಾಣವನ್ನು ಬಳಸುತ್ತಿರುವವರಿಗೆ, ನಿರ್ದಿಷ್ಟ ವಿಷಯವೊಂದರ ಬಗ್ಗೆ ಮೊದಲು ಟ್ವೀಟ್ ಮಾಡಿದ್ದು ಯಾರು ಅಂತ ತಿಳಿದುಕೊಳ್ಳುವ ಕುತೂಹಲವಿರಬಹುದು. ಉದಾಹರಣೆಗೆ, ಮೊನ್ನೆ ನಟ ಸಲ್ಮಾನ್ ಖಾನ್‌ಗೆ ಶಿಕ್ಷೆ ಪ್ರಕಟವಾದ ದಿನ #SalmanVerdict ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಲಕ್ಷಾಂತರ ಟ್ವೀಟ್‌ಗಳು ಹರಿದಾಡಿದವು. ಆದರೆ ಅದನ್ನು ಮೊದಲು ಪ್ರಾರಂಭಿಸಿದ್ದು ಯಾರು ಅಂತ ತಿಳಿದುಕೊಳ್ಳುವುದು ಹೇಗೆ? ಅದಕ್ಕಾಗಿಯೇ ಒಂದು ಜಾಲ ತಾಣವಿದೆ. http://ctrlq.org/first/ ಎಂಬಲ್ಲಿಗೆ ಹೋಗಿ, ಯಾವ ವಿಷಯದ ಟ್ವೀಟ್ ಬೇಕೋ ಅದನ್ನು ಟೈಪ್ ಮಾಡಿ. ಕೆಲವೇ ಕ್ಷಣಗಳಲ್ಲಿ ಅದು ಟ್ವಿಟರ್ ಡೇಟಾಬೇಸ್ ಅನ್ನು ಪರೀಕ್ಷಿಸಿ, ಫಲಿತಾಂಶವನ್ನು ನಿಮ್ಮ ಮುಂದಿಡುತ್ತದೆ.
ಇವನ್ನೂ ನೋಡಿ
ಕಾಫಿ ಟೇಬಲ್ ಬುಕ್ನಲ್ಲಿ ದೇವಿ ಮಹಾತ್ಮೆ ಯಕ್ಷಗಾನ
ಕೃತಿ: ದೇವಿ ಮಹಾತ್ಮೆ, Coffee Table Book
ಲೇ: ಸದಾನಂದ ಹೆಗಡೆ ಹರಗಿ
ಪ್ರಕಾಶನ: ರವಿಶ್ರೀ ಆರ್ಟ್ ಪ್ರೊಮೋಶನ್ ಫೌಂಡೇಶನ್, ಕುಳಾಯಿ
ಪುಟಗಳು: 64
ಬೆಲೆ: ರೂ. 250/- ಯಕ್ಷಗಾನ ಎಂದರೆ ಅದೊಂದು ಕಲೆ ಮಾತ್ರವಲ್ಲ, ಬಣ್ಣದ ಲೋಕವೂ ಆಗಿರುವ...