ಜಿಮೇಲ್ ಖಾತೆ ಹೊಂದಿರುವವರಿಗೆ ಗೂಗಲ್ ಡ್ರೈವ್ ಎಂಬ ಆನ್‌ಲೈನ್ (ಕ್ಲೌಡ್) ಸ್ಟೋರೇಜ್ ತಾಣದಲ್ಲಿ 15 ಜಿಬಿಯಷ್ಟು ಪ್ರಮಾಣದಲ್ಲಿ ಯಾವುದೇ ಫೈಲುಗಳನ್ನು ಉಚಿತವಾಗಿ ಸಂಗ್ರಹಿಸಿಡಬಹುದೆಂದು ಗೊತ್ತಲ್ಲವೇ? ಈ ಉಚಿತ ಸಂಗ್ರಹಣಾಗಾರಕ್ಕೆ ಇನ್ನೂ ಎರಡು ಜಿಬಿಯಷ್ಟು ಹೆಚ್ಚುವರಿಯಾಗಿ ಸೇರ್ಪಡಿಸಿಕೊಳ್ಳಬಹುದು. ಹೇಗೆ ಗೊತ್ತೇ? http://goo.gl/ccgyV0 ಎಂಬಲ್ಲಿ ಕ್ಲಿಕ್ ಮಾಡಿ, ನಿಮ್ಮ ಜಿಮೇಲ್ ಮೂಲಕ ಲಾಗಿನ್ ಆಗಿ. ನಿಮ್ಮ ಖಾತೆಯ ಆನ್‌ಲೈನ್ ಸುರಕ್ಷತೆ ಕುರಿತು ಮರುಪರಿಶೀಲನೆ ಮಾಡಿಕೊಳ್ಳಿ. ತನ್ನಲ್ಲಿರುವ ಎಲ್ಲ ಫೈಲುಗಳ ರಕ್ಷಣೆಗೆ ಗೂಗಲ್ ಬದ್ಧವಾಗಿದ್ದರೂ, ನಿಮ್ಮ ಸುರಕ್ಷತೆಗಾಗಿ ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳಲು, ಗೂಗಲ್ ನೀಡುತ್ತಿರುವ ಕೊಡುಗೆ. ಒಂದು ಕಂಡಿಶನ್ ಇದೆ. ಫೆ.17ರೊಳಗೆ ಇದನ್ನು ಮುಗಿಸಿದರೆ ಮಾತ್ರ. ಫೆ.28ರೊಳಗೆ ಈ ಕುರಿತು ನಿಮಗೆ ಮೇಲ್ ಮೂಲಕ ದೃಢೀಕರಣ ಲಭಿಸುತ್ತದೆ.
ಇವನ್ನೂ ನೋಡಿ
ಪರಮ ಕಳ್ಳ ಪೊಲೀಸರು!
ಕಳ್ಳರ ಪೋಷಕರೂ, ಅವರನ್ನು ಪೋಷಿಸುವವರೂ....
ಹೌದು, ಈಗಷ್ಟೇ ನನಗರ್ಥವಾಗತೊಡಗಿದೆ. ಯಾವುದೇ ಒಂದು ಊರಿನಲ್ಲಿ ದೊಡ್ಡದೊಂದು ಅಪರಾಧ, ಕಳ್ಳತನ, ದರೋಡೆ ಇತ್ಯಾದಿ ಸಂಭವಿಸಿದರೆ ಆ ಊರಿನ ಪೊಲೀಸ್ ಇನ್ಸ್ ಪೆಕ್ಟರನ್ನೇಕೆ ಸಸ್ಪೆಂಡ್ ಮಾಡಬೇಕು ಎಂಬ ಯಕ್ಷಪ್ರಶ್ನೆಗೆ...