ಜಿಮೇಲ್ ಖಾತೆ ಹೊಂದಿರುವವರಿಗೆ ಗೂಗಲ್ ಡ್ರೈವ್ ಎಂಬ ಆನ್‌ಲೈನ್ (ಕ್ಲೌಡ್) ಸ್ಟೋರೇಜ್ ತಾಣದಲ್ಲಿ 15 ಜಿಬಿಯಷ್ಟು ಪ್ರಮಾಣದಲ್ಲಿ ಯಾವುದೇ ಫೈಲುಗಳನ್ನು ಉಚಿತವಾಗಿ ಸಂಗ್ರಹಿಸಿಡಬಹುದೆಂದು ಗೊತ್ತಲ್ಲವೇ? ಈ ಉಚಿತ ಸಂಗ್ರಹಣಾಗಾರಕ್ಕೆ ಇನ್ನೂ ಎರಡು ಜಿಬಿಯಷ್ಟು ಹೆಚ್ಚುವರಿಯಾಗಿ ಸೇರ್ಪಡಿಸಿಕೊಳ್ಳಬಹುದು. ಹೇಗೆ ಗೊತ್ತೇ? http://goo.gl/ccgyV0 ಎಂಬಲ್ಲಿ ಕ್ಲಿಕ್ ಮಾಡಿ, ನಿಮ್ಮ ಜಿಮೇಲ್ ಮೂಲಕ ಲಾಗಿನ್ ಆಗಿ. ನಿಮ್ಮ ಖಾತೆಯ ಆನ್‌ಲೈನ್ ಸುರಕ್ಷತೆ ಕುರಿತು ಮರುಪರಿಶೀಲನೆ ಮಾಡಿಕೊಳ್ಳಿ. ತನ್ನಲ್ಲಿರುವ ಎಲ್ಲ ಫೈಲುಗಳ ರಕ್ಷಣೆಗೆ ಗೂಗಲ್ ಬದ್ಧವಾಗಿದ್ದರೂ, ನಿಮ್ಮ ಸುರಕ್ಷತೆಗಾಗಿ ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳಲು, ಗೂಗಲ್ ನೀಡುತ್ತಿರುವ ಕೊಡುಗೆ. ಒಂದು ಕಂಡಿಶನ್ ಇದೆ. ಫೆ.17ರೊಳಗೆ ಇದನ್ನು ಮುಗಿಸಿದರೆ ಮಾತ್ರ. ಫೆ.28ರೊಳಗೆ ಈ ಕುರಿತು ನಿಮಗೆ ಮೇಲ್ ಮೂಲಕ ದೃಢೀಕರಣ ಲಭಿಸುತ್ತದೆ.
ಇವನ್ನೂ ನೋಡಿ
Google Photos ನಲ್ಲಿ ಆ್ಯನಿಮೇಶನ್, ವೀಡಿಯೋ ತಯಾರಿಸಲು ಹೀಗೆ ಮಾಡಿ
ಆಂಡ್ರಾಯ್ಡ್ ಹೊಸ ಆವೃತ್ತಿಯ ಫೋನ್ಗಳನ್ನು ಹೊಂದಿರುವವರಿಗೆ ಬೇರಾವುದೇ ಆ್ಯಪ್ಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲದೆಯೇ, ಜೀವನದ ಅಮೂಲ್ಯ ಕ್ಷಣಗಳ ವೀಡಿಯೊಗಳನ್ನು ಕ್ಷಣ ಮಾತ್ರದಲ್ಲಿ ರಚಿಸುವ ಆಯ್ಕೆಯೊಂದಿದೆ. ನೀವು ಆಂಡ್ರಾಯ್ಡ್ ಫೋನ್ಗಳಲ್ಲಿ ಮೊದಲೇ ಇನ್ಸ್ಟಾಲ್ ಆಗಿ ಬರುವ...