ಗೂಗಲ್‌ನ ಕ್ರೋಮ್ ಬ್ರೌಸರ್ ಬಳಸುತ್ತಿರುವವರು ಕೆಲವೊಮ್ಮೆ ಬ್ರೌಸರ್‌ನ ತೆರೆದ ಟ್ಯಾಬ್‌ನ ಮೇಲ್ಭಾಗದ ಬಲತುದಿಯಲ್ಲಿ (ಬ್ರೌಸರ್ ಮುಚ್ಚಲು ಇರುವ X ಗುರುತು ಪಕ್ಕದಲ್ಲಿ) ಮೈಕ್ ರೀತಿಯ ಐಕಾನ್ ಕಾಣಿಸಿಕೊಂಡಿದ್ದನ್ನು ನೋಡಿರಬಹುದು. ಇದರ ಕೆಲಸವೇನು ಮತ್ತು ಇದು ಕೆಲವೊಮ್ಮೆ ಮಾತ್ರ ಯಾಕಾಗಿ ಕಾಣಿಸಿಕೊಳ್ಳುತ್ತದೆ? ವೀಡಿಯೋ ಅಥವಾ ಆಡಿಯೋ ಪ್ಲೇ ಆಗುತ್ತಿರುವ ಟ್ಯಾಬ್‌ನಲ್ಲಿ ಮಾತ್ರವೇ ಈ ಐಕಾನ್ ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಟ್ಯಾಬ್‌ಗಳನ್ನು ತೆರೆದಿಟ್ಟುಕೊಂಡು (ಒಂದೊಂದರಲ್ಲಿ ಒಂದೊಂದು ವೆಬ್ ಪುಟ) ಕೆಲಸ ಮಾಡುತ್ತಾರೆ. ದಿಢೀರನೇ ಸದ್ದು ಕೇಳಿಸಿದಾಗ ಯಾವುದರಲ್ಲಿ ವೀಡಿಯೊ ಅಥವಾ ಆಡಿಯೊ ಪ್ಲೇ ಆಗುತ್ತದೆ ಎಂಬುದು ತಿಳಿಯುವುದಿಲ್ಲ. ಯಾವ ಟ್ಯಾಬ್‌ನಲ್ಲಿ ಸದ್ದು ಕೇಳಿಬರುತ್ತಿದೆ ಎಂಬುದನ್ನು ತಿಳಿಯುವುದಕ್ಕಾಗಿಯೇ ಈ ಐಕಾನ್ ಇದೆ.
ಇವನ್ನೂ ನೋಡಿ
Facebook Profile Lock: ಯಾಕೆ ಬೇಕು, ಯಾಕೆ ಬೇಡ?
Facebook Profile Lock: ಫೇಸ್ಬುಕ್ ಜಾಲತಾಣದಲ್ಲಿ ಇತ್ತೀಚೆಗೆ ನಾವು ಸಾಕಷ್ಟು ಪೋಸ್ಟ್ಗಳನ್ನು ಕಂಡಿರುತ್ತೇವೆ. ಪ್ರೊಫೈಲ್ ಲಾಕ್ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವವರ ಸ್ನೇಹದ ಕೋರಿಕೆಯನ್ನು ಸ್ವೀಕರಿಸಲಾಗುವುದಿಲ್ಲ ಎಂಬ ಒಕ್ಕಣೆ. ಅಂದರೆ, ಯಾರೋ ಫ್ರೆಂಡ್ ರಿಕ್ವೆಸ್ಟ್ (ಸ್ನೇಹದ ಕೋರಿಕೆ) ಕಳುಹಿಸುತ್ತಾರೆ. ಆದರ ನೋಡಿದರೆ ಪ್ರೊಫೈಲ್ ಲಾಕ್ ಆಗಿರುತ್ತದೆ. ಇದರ ಬಳಕೆ ಹೇಗೆ, ಏನು ಪ್ರಯೋಜನ?