ಇಂಟರ್ನೆಟ್ ಇದ್ದರೆ ಏನೆಲ್ಲಾ ಮಾಡಬಹುದೆಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಯಾವುದಾದರೂ ಕೆಲಸ ಮಾಡಬೇಕಿದೆ, ಮೇಲ್ ಕಳಿಸಲೋ, ಯಾರಿಗಾದರೂ ಕರೆ ಮಾಡಲೋ, ಬಿಲ್ ಪಾವತಿಸಲೋ, ನಿರ್ದಿಷ್ಟ ಸಮಯಕ್ಕೆ ಅದರ ಬಗ್ಗೆ ನಿಮಗೆ ನೆನಪಿಸಬೇಕಾಗುತ್ತದೆ. ಯಾರಲ್ಲಿ ಹೇಳುವುದು? ಎಲ್ಲರೂ ಮರೆಗುಳಿಗಳೇ! ಇನ್ನು ಯೋಚನೆ ಬೇಕಾಗಿಲ್ಲ. ಗೂಗಲ್ ಇದೆ. ಗೂಗಲ್ ಸರ್ಚ್ ಪುಟದಲ್ಲಿ ಹೋಗಿ, Set a reminder ಅಂತ ಟೈಪ್ ಮಾಡಿ, ಎಂಟರ್ ಕೊಡಿ. ಒಂದು ಸ್ಕ್ರೀನ್ ಕಾಣಿಸುತ್ತದೆ. ಯಾವುದರ ಬಗ್ಗೆ, ಯಾವಾಗ, ಎಲ್ಲಿ, ಯಾವ ದಿನಾಂಕ, ಸಮಯಕ್ಕೆ ಎಂದೆಲ್ಲಾ ಕೇಳುತ್ತದೆ. ಆ ಫಾರ್ಮ್ ಭರ್ತಿ ಮಾಡಿದರಾಯಿತು. ಇಂಟರ್ನೆಟ್‌ಗೆ ಸಂಪರ್ಕವಾಗಿರುವ ನಿಮ್ಮ ಆಂಡ್ರಾಯ್ಡ್ ಫೋನ್ ಸಕಾಲಕ್ಕೆ ನಿಮಗೆ ಅದನ್ನು ನೋಟಿಫಿಕೇಶನ್ ಮೂಲಕ ಸೂಚನೆ ನೀಡುತ್ತದೆ.
ಇವನ್ನೂ ನೋಡಿ
Thomson Oath Pro 2000 ಟಿವಿ ರಿವ್ಯೂ: ಹೇಗಿದೆ ಆಂಡ್ರಾಯ್ಡ್ ಸ್ಮಾರ್ಟ್ ಟಿವಿ?
ಈಗೇನಿದ್ದರೂ ಸ್ಮಾರ್ಟ್ ಟಿವಿಗಳ ಕಾಲ. ಅದರಲ್ಲಿಯೂ ಮನೆಯಿಂದಲೇ ಕೆಲಸ ಮಾಡುತ್ತಿರುವ ಸಂದರ್ಭ, ಯೂಟ್ಯೂಬ್ ಇಲ್ಲವೇ ಬೇರೆ ಪ್ಲ್ಯಾಟ್ಫಾರ್ಮ್ಗಳ ಮೂಲಕ ನಡೆಯುತ್ತಿರುವ ಆನ್ಲೈನ್ ಮನರಂಜನಾ ಕಾರ್ಯಕ್ರಮಗಳು, ಜೊತೆಗೆ ಮಕ್ಕಳ ಆನ್ಲೈನ್...