ಕಂಪ್ಯೂಟರ್ ಕೀಬೋರ್ಡ್‌ನಲ್ಲಿ Esc ಎಂದು ಬರೆದಿರುವ ಕೀಲಿ ಯಾಕಾಗಿ ಇದೆ ಎಂಬ ಬಗ್ಗೆ ಜನ ಸಾಮಾನ್ಯರಲ್ಲಿ ಸೋಜಿಗ ಇರಬಹುದು. ಕೀಬೋರ್ಡ್‌ನಲ್ಲಿ ಎಲ್ಲದಕ್ಕೂ Yes ಹೇಳಲು Enter ಬಟನ್ ಹೇಗೆ ಇದೆಯೋ, ಯಾವುದೇ ಕಾರ್ಯಕ್ಕೆ No ಅಂತ ಹೇಳಲು ಇರುವುದೇ ಈ Esc ಅಥವಾ ಎಸ್ಕೇಪ್ ಬಟನ್. ಎಂಟರ್ ಒತ್ತಿದರೆ, ಯಾವುದೇ ಸ್ಕ್ರೀನ್‌ನಲ್ಲಿ ಅತ್ಯಂತ ಪ್ರಮುಖವಾದ ಬಟನ್ ಸಕ್ರಿಯವಾಗುತ್ತದೆ. ಯಾವುದೇ ಕಾರ್ಯವನ್ನು ರದ್ದುಗೊಳಿಸಲು, ಮುಚ್ಚಲು ಈ Esc ಬಟನ್ ಇದೆ. ವಾಸ್ತವವಾಗಿ ಇದು Cancel ಬಟನ್‌ನ ಕೆಲಸವನ್ನೇ ಮಾಡುತ್ತದೆ. ಉದಾಹರಣೆಗೆ, ಯೂಟ್ಯೂಬ್ ಅನ್ನು ಪೂರ್ಣ ಸ್ಕ್ರೀನ್‌ನಲ್ಲಿ ನೋಡುತ್ತಿರುವಾಗ, ಎಸ್ಕೇಪ್ ಬಟನ್ ಒತ್ತಿದರೆ, ಫುಲ್ ಸ್ಕ್ರೀನ್ ಮೋಡ್‌ನಿಂದ ನಿರ್ಗಮಿಸುತ್ತದೆ. Yes or No ಎಂಬ ಸಂದೇಶವಿರುವ ವಿಂಡೋ ಕಾಣಿಸಿದಾಗ, Esc ಒತ್ತಿದರೆ, No ಸಕ್ರಿಯವಾಗುತ್ತದೆ.
ಇವನ್ನೂ ನೋಡಿ
Samsung Galaxy M52: ಸ್ಲಿಮ್ ಮತ್ತು ಲೈಟ್ ಆದರೆ ಶಕ್ತಿಶಾಲಿ ಸ್ಮಾರ್ಟ್ಫೋನ್
120Hz AMOLED ಸ್ಕ್ರೀನ್, ವೇಗದ ಸ್ನ್ಯಾಪ್ಡ್ರ್ಯಾಗನ್ 778G ಪ್ರೊಸೆಸರ್, 5G ಸಂಪರ್ಕ ವ್ಯವಸ್ಥೆ ಮತ್ತು ಬಿಕ್ಸ್ಬಿ ಎಂಬ ಜಾಣ ಸಹಾಯಕ ತಂತ್ರಾಂಶದೊಂದಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ52 ಸ್ಮಾರ್ಟ್ಫೋನ್ ಇತ್ತೀಚೆಗೆ ಬಿಡುಗಡೆಯಾಗಿದೆ. ಮಧ್ಯಮ ದರ್ಜೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ, ತೀರಾ ಹಗುರವಾದ ಮತ್ತು ಅತ್ಯುತ್ತಮ ಬ್ಯಾಟರಿಯುಳ್ಳ ಹೊಚ್ಚ ಹೊಸ ಸ್ಮಾರ್ಟ್ ಸಾಧನವಿದು.