ಟೆಕ್ ಟಾನಿಕ್: ಕಂಪ್ಯೂಟರ್ ಸಮಸ್ಯೆ ವರದಿ ನೀಡಲು

0
458

ನಿಮ್ಮ ಕಂಪ್ಯೂಟರಿನಲ್ಲಿ ಏನೋ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯ ನಿವಾರಣೆಗೆ ನಿಮ್ಮ ಸ್ನೇಹಿತರು ಅಥವಾ ದೂರದಲ್ಲಿರುವ ಕಂಪ್ಯೂಟರ್ ತಜ್ಞರಿಗೆ ಇದನ್ನು ವಿವರಿಸಬೇಕು. ಆದರೆ, ಯಾವ ಹಂತದಲ್ಲಿ ಏನಾಗುತ್ತಿದೆ ಎಂದು ವಿವರಿಸಿ ಹೇಳಲು ನಿಮಗೆ ಗೊತ್ತಾಗುತ್ತಿಲ್ಲ. ಬದಲಾಗಿ, ಏನಾಗುತ್ತಿದೆ ಎಂಬುದನ್ನು ರೆಕಾರ್ಡ್ ಮಾಡಿ, ಆ ಫೈಲನ್ನು ಕಳುಹಿಸಿದರೆ? ಇದಕ್ಕಾಗಿ ಕೀಬೋರ್ಡ್‌ನಲ್ಲಿ ವಿಂಡೋಸ್ ಬಟನ್ ಒತ್ತಿ, ಅಥವಾ Start ಎಂಬಲ್ಲಿ ಕ್ಲಿಕ್ ಮಾಡಿ, Search programs and files ಎಂದು ಬರೆದಿರುವ ಸರ್ಚ್ ಬಾಕ್ಸ್‌ನಲ್ಲಿ problem step recorder ಅಂತ ಸರ್ಚ್ ಮಾಡಿದಾಗ, Record Steps to reproduce a problem ಅನ್ನೋದನ್ನ ಕ್ಲಿಕ್ ಮಾಡಿ, ರೆಕಾರ್ಡ್ ಮಾಡಿ. ಕಾಮೆಂಟ್ ಕೂಡ ಸೇರಿಸಬಹುದು. ಏನು ಮಾಡಿದಾಗ ಏನು ಆಯಿತು ಎಂಬ ಸಮಗ್ರ ವಿವರವಿರುವ ಆ ಝಿಪ್ ಫೈಲನ್ನು ಕಳುಹಿಸಿ.

LEAVE A REPLY

Please enter your comment!
Please enter your name here