ನಿಯಮ ಮುರಿದರಷ್ಟೇ ಹೊಸ ಮಾರ್ಗ !

0
303

ಇದೊಂದು ಮಾತು ನಂಬಲೇ ಬೇಕಾದ ನಿಜ.

ನಾವು ರೂಲ್ಸ್, ರೆಗ್ಯುಲೇಶನ್ಸ್ ಅಂತ ಅದನ್ನೇ ಸರಿಯಾಗಿ ಪಾಲಿಸುತ್ತಾ ಬಂದಿದ್ದರೆ, ಹೊಸ ಹೊಸ ಸಂಶೋಧನೆಗಳು ನಡೆಯುವುದು ಸಾಧ್ಯವಿತ್ತೇ?

ಹೊಸ ಹೊಸ ತಂತ್ರಜ್ಞಾನಗಳು ಬಂದಿದ್ದೇ ನಿಯಮ ಮುರಿದು ಅಂದರೆ ಅಡ್ಡ ದಾರಿಯಲ್ಲಿ ಹೋದ ಬಳಿಕವೇ ಅಲ್ಲವೇ? ಅಂದರೆ, ಹೀಗೆಯೇ ಹೋಗಬೇಕು, ಆ ಕಡೆ ಹೋಗಬಾರದು ಎಂದು ಕೆಲವರು ಹಾಕಿಕೊಟ್ಟ ದಾರಿಯಲ್ಲೇ ಸಾಗಿದರೆ ಹೊಸತನ ಸಿಗುವುದು ಸಾಧ್ಯವಿಲ್ಲ.

ಬದಲಾವಣೆಯೇ ಜಗದ ನಿಯಮ ಇರುವಾಗ, ಇರುವುದೆಲ್ಲವ ಬಿಟ್ಟು ಇರದುದರೆಡೆಗೇ ಮನಸ್ಸು ತುಡಿಯುತ್ತಿರುವಾಗಲಷ್ಟೇ ನಮಗೆ ಹೊಸ ದಾರಿ, ಹೊಸ ಮಿತ್ರರು, ಹೊಸ ಉತ್ಸಾಹ, ಹೊಸ ಸಾಹಸ, ಹೊಸ ಸವಾಲುಗಳು ಎದುರಾಗುತ್ತವೆ ಎಂಬುದು ಕೂಡ ನನ್ನಷ್ಟೇ ನಿಜ.

ಉದಾಹರಣೆಯಾಗಿ ಉದ್ಯೋಗವನ್ನೇ ತೆಗೆದುಕೊಳ್ಳಿ. ನೌಕರಿ ಪರ್ಮನೆಂಟ್ ಆದ್ರೆ ನಾವಿನ್ನು ಸುರಕ್ಷಿತ ಎಂದು ಭಾವಿಸುವವರು ನಮ್ಮಲ್ಲಿ ಎಷ್ಟು ಮಂದಿ ಇಲ್ಲ! ಪರ್ಮನೆಂಟ್ ಆದ ಕೆಲಸ ಬಿಟ್ಟು ಬೇರೆ ಉದ್ಯೋಗಕ್ಕೆ ಸೇರಲು ಹಿಂದೆಲ್ಲಾ ಹಿಂದೆ-ಮುಂದೆ ನೋಡುತ್ತಾ ಇದ್ದರು.

ಆದರೆ ಈಗ? ಮನಸ್ಥಿತಿ ಬದಲಾಗಿದೆ. ಕೆಲಸ ಪರ್ಮನೆಂಟ್ ಅಂತ ಇದ್ದರೂ ಉದ್ಯೋಗ ಭದ್ರತೆ ಇದೆ ಅನ್ನೋದು ಗ್ಯಾರಂಟಿಯೇ ಎಂದು ಯೋಚಿಸಿನೋಡಿ. ಶೇ.90 ಪ್ರಸಂಗಗಳಲ್ಲೂ ಇದಕ್ಕೆ ನಕಾರಾತ್ಮಕ ಉತ್ತರ ಬರುತ್ತದೆ.

ಹಾಗಿದ್ದರೆ, ಹೊಸ ಕೆಲಸಕ್ಕೆ ಸೇರಿಕೊಂಡರೆ, ಹೊಸ ಜಾಗಕ್ಕೆ ಹೋಗಬಹುದು, ಹೊಸಬರ ಪರಿಚಯ ಆಗಬಹುದು. ಹೊಸ ಹೊಸ ವಿಷಯಗಳನ್ನು ತಿಳಿಯಬಹುದು. ಮಾತ್ರವಲ್ಲದೆ, ಈಗಿನ ಕಾಲದಲ್ಲಿ ಹಣವೇ ಮುಖ್ಯವಾಗಿರುವಾಗ ವೇತನವೂ ಕೂಡ ಹೊಸ ಅಂಕಿ-ಸಂಖ್ಯೆಗಳ ಮಟ್ಟದಲ್ಲೇ ಇರುತ್ತದೆ. ಒಟ್ಟಿನಲ್ಲಿ ಜೀವನದಲ್ಲಿ ಹೊಸತನ ಮೂಡುತ್ತದೆ ಅನ್ನೋದು ನನಗಾದ ಅನುಭವ.

ನನ್ನ ಜೀವನದ ಬಗ್ಗೆ ಒಮ್ಮೆ ಹಿಂತಿರುಗಿ ನೋಡಿದಾಗ ಇದು ಮತ್ತೆ ನೆನಪಾಯಿತು.

ಖಾಯಂ ಆಗಿರುವ ಕೆಲಸ ಬಿಟ್ಟು, ಅದೂ ಈ ವಯಸ್ಸಿನಲ್ಲಿ ಒಂದು ಕಡೆ ನೆಲೆ ನಿಲ್ಲುವುದು ಬಿಟ್ಟು ದೂರದ ಊರಿಗೆ ಹೋಗುತ್ತೀ ಯಾಕೆ ಎಂದು ಆತಂಕ ವ್ಯಕ್ತಪಡಿಸಿದವರು ಹಲವರು.
ಅವರ ಆತಂಕಗಳಿಗೆ ಉತ್ತರ ಕಂಡುಹುಡುಕುವಲ್ಲಿ ಇಷ್ಟು ಕಾಲ ವ್ಯಯಿಸಿದ ನನಗೆ ಸಿಕ್ಕಿದ ಉತ್ತರ ಇದು.

ನಿಮಗೇನಾದರೂ ಬೇರೆ ಕಾರಣಗಳು ಹೊಳೆಯುತ್ತಿವೆಯೇ?

ಸನ್ಮಿತ್ರರಿಗೆ ಸೂಚನ: comment ಕೊಡುವುದಕ್ಕೆ ಆಗೋದಿಲ್ಲ. ಏನೋ ತೊಂದರೆ ಇದೆ.

ಅದಕ್ಕಾಗಿ ಈ ಕೆಳಗಿನ ಲಿಂಕ್ ನಿಂದ ಕಾಮೆಂಟಿಸಲು ಮನವಿ.

http://avisthoughts.wordpress.com/current-affairsಪ್ರಚಲಿತ/

LEAVE A REPLY

Please enter your comment!
Please enter your name here