ಇನ್ನು ಮುಂದೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಸಂವಹನ ನಡೆಸಲು ಫೇಸ್‌ಬುಕ್ ತಾಣಕ್ಕೇ ಲಾಗಿನ್ ಆಗಬೇಕಾಗಿಲ್ಲ ಅಥವಾ ಸ್ಮಾರ್ಟ್ ಫೋನನ್ನೇ ನೆಚ್ಚಿಕೊಳ್ಳಬೇಕಾಗಿಲ್ಲ. ಈ ಮೆಸೆಂಜರ್‌ನ ವೆಬ್ ಆವೃತ್ತಿಯನ್ನು ಫೇಸ್‌ಬುಕ್ ಬಿಡುಗಡೆಗೊಳಿಸಿದೆ. ಅಂದರೆ, ಕಂಪ್ಯೂಟರಿನಲ್ಲಿ ಯಾವುದಾದರೂ ಬ್ರೌಸರ್ ಮೂಲಕವೇ ಫೇಸ್‌ಬುಕ್ ಖಾತೆಗೆ ಲಾಗಿನ್ ಆಗುವ ಮೂಲಕ ನೀವು ಚಾಟ್ ನಡೆಸಬಹುದಾಗಿದೆ. Messenger.com ಎಂದು ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ ಟೈಪ್ ಮಾಡಿ, ಲಾಗಿನ್ ಐಡಿ, ಪಾಸ್‌ವರ್ಡ್ ಮೂಲಕ ಒಳ ಹೊಕ್ಕರೆ ಸಾಕು. ಕಂಪ್ಯೂಟರಿನಿಂದಲೇ ಫೇಸ್‌ಬುಕ್ ಮಾತುಕತೆ ಮುಂದುವರಿಸಬಹುದು.
ಇವನ್ನೂ ನೋಡಿ
16 ಕೋಟಿ ಬೆಲೆ, 430 ಕಿ.ಮೀ. ವೇಗದ ಕಾರು ಭಾರತದಲ್ಲಿ!
ಕರಿ ಬ್ಯೂಟಿ - ಇದು ವಾಯು ವೇಗದ ಬುಗಾಟಿ ಓಹ್! ಹಿಂದೆ ಜರ್ಮನಿಯ ಕಾರುಗಳ ಲೋಕಕ್ಕೆ ಭೇಟಿ ನೀಡಿದ್ದಾಗ, ಅಲ್ಲೊಂದು ವಿಚಿತ್ರವಾದ, ಕರ್ರಗೆ ಫಳ ಫಳನೆ ಹೊಳೆಯುವ, ಜೀರುಂಡೆಯಂತಹಾ ಬಾಡಿಯುಳ್ಳ ವಸ್ತುವೊಂದಿತ್ತು. ಅಂದು ವೂಲ್ಫ್ಬರ್ಗ್ನ...







