ಗ್ರಾಹಕರು ತಮ್ಮ ಇಷ್ಟದ ಮತ್ತು ಲಭ್ಯವಿರುವ ಮೊಬೈಲ್ ಫೋನ್ ಸಂಖ್ಯೆಗಳನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಕರ್ನಾಟಕ ಬಿಎಸ್ಸೆನ್ನೆಲ್ ಕೂಡ ಒದಗಿಸುತ್ತಿದೆ. ತೀರಾ ಫ್ಯಾನ್ಸಿ ಸಂಖ್ಯೆಗಳನ್ನು ಹರಾಜು ಹಾಕಲಾಗುತ್ತದೆಯಾದರೆ, ಇರುವುದರಲ್ಲೇ ಉತ್ತಮ ಸಂಖ್ಯೆಗಳನ್ನು ಆಯ್ದುಕೊಳ್ಳುವ ಅವಕಾಶವನ್ನು ಸಾಮಾನ್ಯ ಗ್ರಾಹಕರಿಗೆ ನೀಡಲಾಗುತ್ತದೆ. ನೀವು ಮಾಡಬೇಕಾದುದಿಷ್ಟೇ. http://bit.ly/urNumber ಎಂಬಲ್ಲಿಗೆ ಹೋಗಿ, ಅಲ್ಲಿ ಲಭ್ಯವಿರುವ ನೂರಾರು ಸಂಖ್ಯೆಗಳನ್ನು ಪರಿಶೀಲಿಸಬಹುದು, ಅಥವಾ ನಿಮಗಿಷ್ಟವಾದ ಅಂಕಿಗಳ ಕಾಂಬಿನೇಶನ್ ಹಾಕಿ, ಹುಡುಕುವ ಆಯ್ಕೆ ಇರುತ್ತದೆ. ನಂಬರ್ ಆಯ್ಕೆ ಮಾಡಿ, ಲಾಕ್ ಮಾಡಿಕೊಂಡು, ಅದಾದ 4 ದಿನಗಳೊಳಗೆ ಬಿಎಸ್ಸೆನ್ನೆಲ್ ಕಚೇರಿಗೆ ಹೋಗಿ ದಾಖಲೆಗಳನ್ನು ಸಲ್ಲಿಸಿದರೆ, ಸಿಮ್ ದೊರೆಯುತ್ತದೆ. ಟ್ರೈ ಮಾಡಿ.
ಇವನ್ನೂ ನೋಡಿ
ChatGPT ಗೆ ಎದುರಾಳಿ Google Bard
ಚಾಟ್-ಜಿಪಿಟಿ ಸಂಭಾಷಣಾ ತಂತ್ರಾಂಶಕ್ಕೆ ಸಮರ್ಥವಾಗಿ ಸವಾಲೊಡ್ಡುತ್ತಿದೆ ಗೂಗಲ್ನ ಬಾರ್ಡ್ (Google Bard).