ಹಳೆಯ ವಿಂಡೋಸ್ XP ಸಿಸ್ಟಂಗಳಿಗೆ ಪ್ಯಾಚ್

0
275

ಇತ್ತೀಚೆಗೆ ವನ್ನಾಕ್ರೈ ಎಂಬ ಸುಲಿಗೆ ಮಾಡುವ ಸಾಮರ್ಥ್ಯವುಳ್ಳ ಮಾಲ್‌ವೇರ್ ಜಗತ್ತನ್ನೇ ಕಂಗೆಡಿಸಿದ್ದು ಎಲ್ಲರಿಗೂ ಗೊತ್ತಿದೆ. ಈಗ ವಿಂಡೋಸ್ 10 ಬಂದಿದ್ದರೂ, ಹೆಚ್ಚಿನ ಕಚೇರಿಗಳಲ್ಲಿ ಮೈಕ್ರೋಸಾಫ್ಟ್‌ನ ಹಳೆಯ ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣಾ ವ್ಯವಸ್ಥೆಯಿರುವ ಕಂಪ್ಯೂಟರುಗಳೇ ಬಳಕೆಯಾಗುತ್ತಿವೆ.

ಇದಕ್ಕೆ ಯಾವುದೇ ತಂತ್ರಾಂಶ ಬೆಂಬಲವನ್ನು ಮೈಕ್ರೋಸಾಫ್ಟ್ ಸಾಕಷ್ಟು ಹಿಂದೆಯೇ ಸ್ಥಗಿತಗೊಳಿಸಿದ್ದರೂ, ವನ್ನಾಕ್ರೈಯಿಂದಾಗಿ ಮತ್ತೆ ಯಾರೂ ತೊಂದರೆಗೆ ಸಿಲುಕಬಾರದು ಎಂಬ ಕಾರಣಕ್ಕೆ ಇದೀಗ ಸೆಕ್ಯುರಿಟಿ ಪ್ಯಾಚ್‌ಗಳನ್ನು ಕಳುಹಿಸಿದೆ. ಅಸಲಿ ತಂತ್ರಾಂಶವಿರುವವರು ಇದನ್ನು ಉಚಿತವಾಗಿ ಪಡೆಯಲಿದ್ದಾರೆ.

ವಿಂಡೋಸ್ ವಿಸ್ತಾ ಕಂಪ್ಯೂಟರುಗಳಿಗೂ ಇದು ಲಭ್ಯವಿದೆ. ಇಂಟರ್ನೆಟ್‌ಗೆ ಸಂಪರ್ಕಗೊಂಡಾಗ ಸೆಕ್ಯುರಿಟಿ ಅಪ್‌ಡೇಟ್ ಕುರಿತ ನೋಟಿಫಿಕೇಶನ್ ಬರುತ್ತವೆ. ಇವುಗಳನ್ನು ಅಪ್‌ಡೇಟ್ ಮಾಡಿಕೊಂಡರೆ ಅಂಥವರ ಕಂಪ್ಯೂಟರ್ ಸುರಕ್ಷಿತ. ಈಗಷ್ಟೇ ಬಿಡುಗಡೆಯಾಗಿರುವುದರಿಂದ ಭಾರತದಲ್ಲಿ ಲಭ್ಯತೆಗೆ ಸ್ವಲ್ಪ ದಿನ ಕಾಯಬೇಕಾಗಬಹುದು.

LEAVE A REPLY

Please enter your comment!
Please enter your name here