ವಾಟ್ಸಪ್ ಬಳಕೆದಾರರು ಯಾವುದೇ ಗ್ರೂಪ್‌ನಲ್ಲಿ ಸಂವಹನ ನಡೆಸುತ್ತಿರುವಾಗ, ಮಧ್ಯೆ ಮಧ್ಯೆ ಬೇರೆಯವರ ಹೇಳಿಕೆಗಳು ಬಂದು ಸಂವಹನದ ನಿರಂತರತೆಗೆ ತೊಡಕಾಗುತ್ತಿತ್ತು. ಇದಕ್ಕೆ ಈಗಾಗಲೇ ರಿಪ್ಲೈ ಆಯ್ಕೆ ನೀಡಿರುವ ವಾಟ್ಸಪ್, ಒಬ್ಬರನ್ನು ಟ್ಯಾಗ್ ಮಾಡುವ ಆಯ್ಕೆಯನ್ನೂ ಕಳೆದ ವಾರದಿಂದ ಒದಗಿಸುತ್ತಿದೆ. ಗ್ರೂಪ್ ಚಾಟ್‌ನಲ್ಲಿ @ ಸಂಕೇತ ಟೈಪ್ ಮಾಡಿದಾಕ್ಷಣ, ಯಾರನ್ನು ಮೆನ್ಷನ್ ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳಲು ನಿಮ್ಮ ವಾಟ್ಸಾಪ್ ಮಿತ್ರರ ಹೆಸರುಗಳ ಪಟ್ಟಿಯನ್ನು ಅಲ್ಲಿ ತೋರಿಸಲಾಗುತ್ತದೆ. ಹೆಸರು ಆಯ್ಕೆ ಮಾಡಿದ ಬಳಿಕ ನಿಮ್ಮ ಸಂದೇಶ ಟೈಪ್ ಮಾಡಿ ಕಳುಹಿಸಿದರೆ, ಅದು ಗ್ರೂಪಿನಲ್ಲಿ ಅವರನ್ನು ಉದ್ದೇಶಿಸಿ ಕಳುಹಿಸಿದ ಸಂದೇಶ ಎಂಬುದು ಇತರೆಲ್ಲರಿಗೂ ತಿಳಿಯುವಂತಾಗುತ್ತದೆ. ಗ್ರೂಪಿನಲ್ಲಿ ಜಗಳವಾಡುವಾಗಲೂ ನಿರ್ದಿಷ್ಟ ವ್ಯಕ್ತಿಯನ್ನೇ ಗುರಿಯಾಗಿರಿಸಿ ನೀವು ನಿಮ್ಮ ಅಭಿಪ್ರಾಯ ತಿಳಿಸಬಹುದು!
ಇವನ್ನೂ ನೋಡಿ
ಟೆಕ್ ಟಾನಿಕ್: ಗೂಗಲ್ ಅಸಿಸ್ಟೆಂಟ್ ಆಡಿಯೋ ಫೈಲ್ ಡಿಲೀಟ್ ಮಾಡುವುದು
ಗೂಗಲ್ ಅಸಿಸ್ಟೆಂಟ್ ಎಂಬ ಧ್ವನಿ ಆಧಾರಿತ ತಂತ್ರಾಂಶದ ಮೂಲಕ ನಾವೇನು ಸರ್ಚ್ ಮಾಡುತ್ತೇವೋ ಅವೆಲ್ಲವನ್ನೂ ಗೂಗಲ್ ದಾಖಲು ಮಾಡಿಟ್ಟುಕೊಂಡಿರುತ್ತದೆ ಎಂಬುದು ಗೊತ್ತು. ಆದರೆ ಇದರ ಆಡಿಯೋ ಫೈಲುಗಳು ಎಲ್ಲಿ ಯಾವಾಗ ಬೇಕಿದ್ದರೂ ಲಭ್ಯವಾಗಬಹುದು....