ನಾವು ಕಳುಹಿಸಿದ ವಾಟ್ಸ್ಆ್ಯಪ್ ಸಂದೇಶವನ್ನು ಮತ್ತೊಬ್ಬರು ಓದಿದರೇ ಇಲ್ಲವೇ, ಓದಿದ್ದರೆ ಎಷ್ಟು ಹೊತ್ತಿಗೆ ನೋಡಿದರು ಎಂದು ತಿಳಿದುಕೊಳ್ಳುವ ಅವಕಾಶವೊಂದನ್ನು ವಾಟ್ಸ್ಆ್ಯಪ್ ಹಿಂದೆಯೇ ಪರಿಚಯಿಸಿತ್ತು. ಅದುವೇ ನೀಲಿ ಬಣ್ಣದ ಟಿಕ್ ಮಾರ್ಕ್. ತಮ್ಮ ಪ್ರೈವೆಸಿ ಬಗ್ಗೆ ಹೆಚ್ಚು ಆಸ್ಥೆ ವಹಿಸುವವರು, ಸದಾ ಕಾಲ ಆನ್‌ಲೈನ್‌ನಲ್ಲೇ ಇರುತ್ತಾರೆ ಅಂತ ಬೇರೆಯವರು ತಿಳಿದುಕೊಳ್ಳದಂತಿರಲು ಅಥವಾ ಬೇರಾವುದೇ ಉದ್ದೇಶಕ್ಕೆ ಇದು ಬೇರೊಬ್ಬರಿಗೆ ತಿಳಿಯದೇ ಇರಬೇಕಿದ್ದರೆ, ಸೆಟ್ಟಿಂಗ್ಸ್‌ನಲ್ಲಿ ಅಕೌಂಟ್ಸ್ ವಿಭಾಗದಲ್ಲಿ, ಪ್ರೈವೆಸಿ ಎಂಬಲ್ಲಿ ‘ಲಾಸ್ಟ್ ಸೀನ್’ ಎಂಬುದನ್ನು ಯಾರಿಗೂ ಕಾಣಿಸದಂತೆ ಮಾಡುವ ಆಯ್ಕೆಯಿದೆ. ಇದು ಪಠ್ಯ ಸಂದೇಶ, ಫೋಟೋ ಮತ್ತು ವೀಡಿಯೋಗಳಿಗೆ ಅನ್ವಯವಾದರೂ, ವಾಯ್ಸ್ ಮೆಸೇಜ್‌ಗೆ (ಆಡಿಯೋ ಸಂದೇಶ) ಅನ್ವಯವಾಗುವುದಿಲ್ಲ. ಹೀಗಾಗಿ, ನಮ್ಮ ಸಂದೇಶವನ್ನು ಅವರು ನೋಡಿದ್ದಾರೆಯೇ, ಇಲ್ಲವೇ ತಿಳಿಯಲು ವಾಯ್ಸ್ ಸಂದೇಶ ಕಳುಹಿಸುವುದೂ ಒಂದು ಟ್ರಿಕ್!
ಇವನ್ನೂ ನೋಡಿ
Zeb Sound Bomb Q Pro Ear bud Review: ಗುಣಮಟ್ಟದ ಧ್ವನಿಯುಳ್ಳ ಇಯರ್ಬಡ್
ನಮ್ಮದೇ ದೇಶದ ಆಡಿಯೋ ಸಿಸ್ಟಂ ಹಾಗೂ ಲೈಫ್ಸ್ಟೈಲ್ ಗ್ಯಾಜೆಟ್ಗಳ ತಯಾರಕ ಸಂಸ್ಥೆ ಜೆಬ್ರಾನಿಕ್ಸ್, ಈಗ ವಿದೇಶದ ಪ್ರೀಮಿಯಂ ಬ್ರ್ಯಾಂಡ್ಗಳಿಗೆ ನಿಧಾನವಾಗಿ ಸ್ಫರ್ಧೆ ನೀಡುತ್ತಿದೆ. 2020 ವರ್ಷದ ಕೊನೆಯಲ್ಲಿ 'ಜೆಬ್ ಸೌಂಡ್...