ಟೆಕ್ ಟಾನಿಕ್: FB ಯಲ್ಲಿ ಎಷ್ಟು ಸಮಯ ‘ವ್ಯರ್ಥ’?

ಆಂಡ್ರಾಯ್ಡ್ ಹೊಸ ಆವೃತ್ತಿ ‘ಪಿ’ ಹಾಗೂ ಆ್ಯಪಲ್ ಐಒಎಸ್ 12 ಆವೃತ್ತಿಯಲ್ಲಿ, ನೀವು ಎಷ್ಟು ಸಮಯ ಫೋನ್‌ನಲ್ಲೇ ಕಳೆಯುತ್ತೀರಿ ಎಂಬುದನ್ನು ತಿಳಿಸುವ ವ್ಯವಸ್ಥೆ ವರ್ಷಾಂತ್ಯದಲ್ಲಿ ಬರಲಿದೆ. ಇದೀಗ ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್ ಕೂಡ, ನೀವು ಫೇಸ್‌ಬುಕ್‌ನಲ್ಲಿ ಎಷ್ಟು ಸಮಯ ಕಳೆದಿರಿ ಎಂಬುದನ್ನು ತಿಳಿಸಲು ಹೊರಟಿದೆ. ಫೇಸ್‌ಬುಕ್‌ನಲ್ಲಿ ನಿಮ್ಮ ಮಿತ್ರರಿಂದ ಬರುವ ಅಪ್‌ಡೇಟ್‌ಗಳನ್ನು ನಿಮ್ಮ ಫೋನ್‌ನಲ್ಲಿ ಕೆಳಗೆ ಸ್ಕ್ರಾಲ್ ಮಾಡುತ್ತಾ, ಎಷ್ಟು ಸಮಯ ಕಳೆಯುತ್ತೀರಿ ಎಂಬುದನ್ನು ಅದರ ಹೊಸ ವೈಶಿಷ್ಟ್ಯವು ತಿಳಿಸಲಿದೆ. ಅದಲ್ಲದೆ, ದಿನಕ್ಕೆ ಇಷ್ಟೇ ಸಮಯ ಲೈಕ್, ಕಾಮೆಂಟ್, ಪೋಸ್ಟ್ ಮಾಡುತ್ತಾ ಇರಬೇಕು ಅಂತ ನೀವು ಹೊಂದಿಸಿಟ್ಟರೆ, ಈ ಬಗ್ಗೆ ನೆನಪಿಸುವ ವ್ಯವಸ್ಥೆಯೂ ಎಫ್‌ಬಿ ಮೊಬೈಲ್ ಆ್ಯಪ್‌ಗಳಲ್ಲಿ ಜಾರಿಗೆ ಬರಲಿದೆ. ಈ ವ್ಯವಸ್ಥೆಯನ್ನು ತಂತ್ರಜ್ಞಾನಿಗಳು ಪರೀಕ್ಷಿಸಿದ ಬಳಿಕ, ಅವರಿಗಿಷ್ಟವಾದರೆ ಮಾತ್ರ ಎಲ್ಲರಿಗೂ ಪರಿಚಯಿಸಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ನಮ್ಮ ಸಮಯ ‘ವ್ಯರ್ಥ’ ಮಾಡುವುದರ ಬಗೆಗಿನ ನಿಯಂತ್ರಣ ನಮ್ಮ ಕೈಯಲ್ಲೇ ಇರಲಿದೆ.

Leave a Reply

Your email address will not be published. Required fields are marked *