ನೀವು ಬಡವರಾಗಿ ಹುಟ್ಟಿದ್ರೆ, ಅದು ನಿಮ್ಮ ತಪ್ಪಲ್ಲ. ಆದರೆ ಬಡವರಾಗಿಯೇ ಸಾಯುವುದು… ಖಂಡಿತವಾಗಿಯೂ ತಪ್ಪು ನಿಮ್ಮದು. – ಬಿಲ್ ಗೇಟ್ಸ್
ಯಾವುದೇ ಒಂದು ದಿನ, ನಿಮಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ ಎಂದ್ರೆ, ನೀವು ಸರಿಯಾದ ಹಾದಿಯಲ್ಲಿ ಸಾಗಿಲ್ಲ ಎಂದೇ ಅರ್ಥ. – ಸ್ವಾಮಿ ವಿವೇಕಾನಂದ
ಯಶಸ್ಸಿನ ಮೂರು ಸೂತ್ರಗಳು:
1. ಇತರರಿಗಿಂತ ಹೆಚ್ಚು ತಿಳಿದುಕೊಳ್ಳಿ
2. ಇತರರಿಗಿಂತ ಹೆಚ್ಚು ಶ್ರಮ ಪಡಿ
3. ಇತರರಿಗಿಂತ ಕಡಿಮೆ ನಿರೀಕ್ಷಿಸಿ. – ವಿಲಿಯಂ ಶೇಕ್ಸ್ಪಿಯರ್ನೀವು ಜಯಿಸಿದ್ದೀರೆಂದರೆ, ಯಾವುದೇ ವಿವರಣೆ ನೀಡಬೇಕಿಲ್ಲ. ಆದರೆ ನೀವು ಸೋತರೆ, ವಿವರಣೆ ನೀಡುವುದಕ್ಕೆ ನೀವೇ ಇರಬಾರದು. – ಅಡಾಲ್ಫ್ ಹಿಟ್ಲರ್
ಜಗತ್ತಿನ ಯಾರೊಂದಿಗೂ ನಿಮ್ಮನ್ನು ನೀವು ಹೋಲಿಸಿಕೊಳ್ಳಬೇಡಿ. ನೀವೀ ರೀತಿ ಮಾಡಿದ್ದೇ ಆದರೆ, ನಿಮ್ಮನ್ನೇ ನೀವು ಅವಮಾನಿಸಿದಂತೆ. – ಅಲೆನ್ ಸ್ಟ್ರೈಕ್
ನಾವು ನೋಡುತ್ತಿರುವ ವ್ಯಕ್ತಿಯನ್ನೇ ಪ್ರೀತಿಸುವುದು ನಿಮಗೆ ಸಾಧ್ಯವಿಲ್ಲ ಎಂದಾದರೆ, ನಾವು ನೋಡದೆ ಇರುವ ದೇವರನ್ನು ಹೇಗೆ ಪ್ರೀತಿಸಬಲ್ಲಿರಿ? -ಮದರ್ ತೆರೇಸಾ
ಗೆಲ್ಲುವುದೆಂದರೆ ಯಾವಾಗಲೂ ಮೊದಲ ಸ್ಥಾನ ಪಡೆಯುವುದೆಂದಲ್ಲ, ಗೆಲುವು ಎಂದರೆ ನೀವು ಈ ಹಿಂದೆ ಮಾಡಿದ್ದಕ್ಕಿಂತ ಉತ್ತಮ ನಿರ್ವಹಣೆ ತೋರುವುದು. -ಬೋನಿ ಬ್ಲೇರ್
ನಾನು ಸಾವಿರ ಸಲ ವಿಫಲವಾಗಿದ್ದೇನೆಂದು ಹೇಳಿಕೊಳ್ಳಲಾರೆ. ಅದನ್ನೇ… ವೈಫಲ್ಯಕ್ಕೆ ಸಾವಿರ ಕಾರಣಗಳನ್ನು ಪತ್ತೆ ಹಚ್ಚಿದ್ದೇನೆ ಎಂದೇ ಪರಿಗಣಿಸುತ್ತೇನೆ. – ಥಾಮಸ್ ಎಡಿಸನ್
ಎಲ್ಲರೂ ಜಗತ್ತನ್ನು ಬದಲಾಯಿಸುತ್ತೇನೆ ಎನ್ನುತ್ತಾರೆ. ಆದರೆ ಯಾರು ಕೂಡ ತಮ್ಮನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ. -ಲಿಯೋ ಟಾಲ್‌ಸ್ಟಾಯ್
ಎಲ್ಲರನ್ನೂ ನಂಬುವುದೆಂದರೆ ಅಪಾಯಕಾರಿ; ಅಂತೆಯೇ ಯಾರನ್ನೂ ನಂಬದೇ ಇರುವುದು ಮತ್ತೂ ಅಪಾಯಕಾರಿ. – ಅಬ್ರಹಾಂ ಲಿಂಕನ್
ತಾವೆಂದಿಗೂ ಜೀವನದಲ್ಲಿ ತಪ್ಪನ್ನೇ ಮಾಡಿಲ್ಲ ಎಂದು ಯಾರಾದರೂ ಭಾವಿಸಿದರೆ, ಅವರು ಜೀವನದಲ್ಲೆಂದಿಗೂ ಹೊಸ ವಿಷಯ ಅರಿತುಕೊಳ್ಳಲು ಯತ್ನಿಸಿಲ್ಲ ಎಂದರ್ಥ. – ಐನ್‌ಸ್ಟೈನ್
ವಿಶ್ವಾಸ, ಮಾತು, ಸಂಬಂಧ ಮತ್ತು ಹೃದಯ- ಜೀವನದಲ್ಲಿ ಈ ನಾಲ್ಕನ್ನೆಂದಿಗೂ ಮುರಿಯಬೇಡಿ. ಯಾಕೆಂದರೆ, ಇವುಗಳು ಮುರಿದಾಗ, ಸದ್ದಾಗುವುದಿಲ್ಲ, ಬರೇ ನೋವು ಮಾತ್ರ. – ಚಾರ್ಲ್ಸ್
ಜನರನ್ನು ಅಳೆಯಲು ನೀವು ಆರಂಭಿಸಿದರೆ, ಅವರನ್ನು ಪ್ರೀತಿಸುವುದಕ್ಕೇ ನಿಮಗೆ ಸಮಯ ಇರಲಾರದು. -ಮದರ್ ತೆರೇಸಾ
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…
View Comments
ಇಂಥ ಸಾಲುಗಳು ನಂಗೆ ತುಂಬಾ ಇಷ್ಟವಾಗುತ್ತವೆ..ಚಿಕ್ಕದಿರುವಾಗ ಬರೆದಿಟ್ಟ ಸಾಲುಗಳು ತುಂಬಿ ಐದು ಪುಸ್ತಕ ಆಗಿದೆ. ಆದರೆ ಬೆಂದಕಾಳೂರಿನಲ್ಲಿ ಬೆಯುವಾಗ ಯಾವುದೂ ನೆನಪಾಗಲ್ಲ..
-ಚಿತ್ರ
ಚಿತ್ರ,
ಹೌದು. ಈ ಸಾಲುಗಳೆಲ್ಲಾ ಅದೆಷ್ಟು ಚೆನ್ನಾಗಿ ಜೀವನ ಬೋಧಿಸುತ್ತವೆ. ಸುಮ್ಮನೇ ಕುಳಿತಿದ್ದಾಗ ಕಣ್ಣು ಹಾಯಿಸಿದರೆ ಈ ವಾಕ್ಯಗಳಲ್ಲಿ ಅಡಗಿರುವ ಅಪಾರ ಅರ್ಥ ಅರಿವಿಗೆ ಬರುತ್ತದೆ.