ಇವನ್ನೂ ನೋಡಿ
Crossbeats Ignite Lyt Smart Watch Review: ಉತ್ತಮ ಬ್ಯಾಟರಿಯ ಅಗ್ಗದ ಸ್ಮಾರ್ಟ್ವಾಚ್
Crossbeats Ignite Lyt Smart Watch Review: ದುಬಾರಿ ಬೆಲೆಯ ಆ್ಯಪಲ್ ವಾಚ್ ಕೂಡ ಬಳಸಿ ನೋಡಿದ್ದೆನಾದುದರಿಂದ ಕೇವಲ 2 ಸಾವಿರ ರೂ. ಒಳಗಿನ ಈ ಸಾಧನ ಹೇಗಿದ್ದೀತು ಎಂಬ ಕುತೂಹಲ ಸಹಜವಾಗಿತ್ತು. ಆದರೆ, ಎಲ್ಲ ಪ್ರೀಮಿಯಂ ಸ್ಮಾರ್ಟ್ ವಾಚ್ಗಳು ಮಾಡಬಲ್ಲ ಕಾರ್ಯಗಳು ಈ ಅಗ್ಗದ ದರದ ಕ್ರಾಸ್ಬೀಟ್ಸ್ ಇಗ್ನೈಟ್ ಲೈಟ್ನಲ್ಲೂ ಇದೆ. ಇಷ್ಟಲ್ಲದೆ, ಗಮನ ಸೆಳೆದ ಪ್ರಧಾನ ಅಂಶ ಇದರ ಬ್ಯಾಟರಿ ಚಾರ್ಜ್. ಸಾಮಾನ್ಯ ಬಳಕೆಯಲ್ಲಿ ತಿಂಗಳಿಗೆ ಕೇವಲ ಎರಡು ಬಾರಿ ಚಾರ್ಜ್ ಮಾಡಿದರೆ ಸಾಕಾಗುತ್ತದೆ. ಆರೋಗ್ಯದ ವೈಶಿಷ್ಟ್ಯಗಳು ಕೂಡ ಗಮನ ಸೆಳೆದವು. ಐದಾರು ಸಾವಿರ ರೂಪಾಯಿಯಿಂದ 70-80 ಸಾವಿರ ರೂ. ಮೌಲ್ಯದ ಸ್ಮಾರ್ಟ್ವಾಚ್ಗಳು ಮಾಡುವ ಎಲ್ಲ ಪ್ರಮುಖ ಕೆಲಸಗಳು ಇದರಲ್ಲಿ ಸಾಧ್ಯ. ಒಳ್ಳೆಯ ಫಿಟ್ನೆಸ್ ಸಂಗಾತಿ ಎಂದೂ ಪರಿಗಣಿಸಬಹುದು. ಕೊರತೆಯೆಂದರೆ, ನಮ್ಮ ಭಾಷೆಯ ನೋಟಿಫಿಕೇಶನ್ಗಳನ್ನು ಓದಲಾಗದು ಮತ್ತು ಇದರ ಐಪಿಎಸ್ ಡಿಸ್ಪ್ಲೇ 240 x280 ಪಿಕ್ಸೆಲ್ ರೆಸೊಲ್ಯುಶನ್ ಇದೆ. ಆದರೆ ಬೆಲೆಗೆ ಹೋಲಿಸಿದರೆ ಇದಕ್ಕಿಂತ ಹೆಚ್ಚಿನ ಶಾರ್ಪ್ ಡಿಸ್ಪ್ಲೇ ಗುಣಮಟ್ಟ ನಿರೀಕ್ಷಿಸಲಾಗದು. ಒಂದು ವರ್ಷ ವಾರಂಟಿಯೂ ಜೊತೆಗಿದೆ.