ಕಾರ್ಯಕ್ಷಮತೆ: ಐಫೋನ್ 5ಎಸ್ ಮಾಡೆಲ್, ಹಿಂದಿನ ಐಒಎಸ್ 11ಕ್ಕೆ ಅಪ್‌ಗ್ರೇಡ್ ಆದ ಬಳಿಕ ತೀರಾ ನಿಧಾನವಾಗಿ ಕೆಲಸ ಮಾಡುತ್ತಿತ್ತು. ಬಳಕೆದಾರರೂ ಸಾಕಷ್ಟು ಮಂದಿ ದೂರಿದ್ದರು. ಹೊಸ ಅಪ್‌ಡೇಟ್‌ನಲ್ಲಿ ಈ ಸಮಸ್ಯೆ ನಿವಾರಣೆಯಾಗಿದೆ. ಕೆಲಸ ವೇಗವಾಗಿದೆ. ಬ್ಯಾಟರಿ ಸಮಸ್ಯೆಯೂ ಸುಧಾರಿಸಿದೆ.
ನೋಟಿಫಿಕೇಶನ್: ಹಲವು ಆ್ಯಪ್‌ಗಳಿಂದ, ವಿಶೇಷವಾಗಿ ವಾಟ್ಸ್ಆ್ಯಪ್‌ನಿಂದ ಹತ್ತಾರು ನೋಟಿಫಿಕೇಶನ್‌ಗಳು ಬರುವುದು ಕಿರಿಕಿರಿ ಅನ್ನಿಸಿದರೆ, ಈಗ ಅವುಗಳು ಒಂದು ಗುಚ್ಛ ರೂಪದಲ್ಲಿ ಬರುತ್ತವೆ ಮತ್ತು ಎಡಕ್ಕೆ ನಿಧಾನವಾಗಿ ಸ್ವೈಪ್ ಮಾಡಿದಾಗ, ‘ಮ್ಯಾನೇಜ್’ ಆಯ್ಕೆಯ ಮೂಲಕ ಅವುಗಳನ್ನು ಸದ್ದಿಲ್ಲದೆ ಬರುವಂತೆ ಮಾಡಬಹುದು, ಅಥವಾ ಎಲ್ಲವನ್ನೂ ಏಕಕಾಲಕ್ಕೆ ಕ್ಲಿಯರ್ ಮಾಡಬಹುದು.
ಫೋನ್ ಗೀಳು ಕಡಿಮೆ ಮಾಡಿ: ಐಒಎಸ್ 12ರ ಸೆಟ್ಟಿಂಗ್ಸ್‌ನಲ್ಲಿ ‘ಸ್ಕ್ರೀನ್ ಟೈಮ್’ ಎಂಬ ವೈಶಿಷ್ಟ್ಯವಿದೆ. ನಿರ್ದಿಷ್ಟ ಆ್ಯಪ್‌ನಲ್ಲಿ (ಉದಾ. ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್ ಇತ್ಯಾದಿ) ಎಷ್ಟು ಸಮಯ ವ್ಯಯಿಸುತ್ತೀರಿ ಅಂತ ತಿಳಿಯಬಹುದು; ಅದಕ್ಕೆ ಇಂತಿಷ್ಟು ಸಮಯ ಮಾತ್ರ ಬಳಸುತ್ತೇನೆ ಎಂದು ಸಮಯ ಸೆಟ್ ಮಾಡಬಹುದು. ಸಮಯ ಮುಗಿದಾಗ ಫೋನ್ ಅಲರ್ಟ್ ಮೂಲಕ ಎಚ್ಚರಿಸುತ್ತದೆ. ಮಕ್ಕಳಲ್ಲಿ ಮೊಬೈಲ್ ವ್ಯಸನ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸಲು ಏನಾದರೂ ಮಾಡಿ ಅಂತ ಆ್ಯಪಲ್ ಶೇರುದಾರರು ಹಿಂದೆ ಮನವಿ ಸಲ್ಲಿಸಿದ್ದರು. ಬಹುಶಃ ಅದರಿಂದಾಗಿ ಈ ವೈಶಿಷ್ಟ್ಯ ಅಳವಡಿಕೆಯಾಗಿರಬಹುದು.
ವಾಯ್ಸ್ ಮೆಮೋ: ಐಫೋನ್‌ನಲ್ಲಿ ಧ್ವನಿ ರೆಕಾರ್ಡಿಂಗ್ ಮಾಡಲು ಇದುವರೆಗೆ ತ್ರಾಸ ಪಡಬೇಕಾಗುತ್ತಿತ್ತು. ಆದರೆ ಈಗ ವಾಯ್ಸ್ ಮೆಮೋ ಎಂಬ ಆ್ಯಪ್ ಇದನ್ನು ಸುಲಭ ಸಾಧ್ಯವಾಗಿಸಿದೆ. ಯಾವ ಸ್ಥಳದಿಂದ ರೆಕಾರ್ಡ್ ಮಾಡಲಾಗುತ್ತದೆ ಎಂದು ಸ್ವಯಂಚಾಲಿತವಾಗಿ ಟ್ಯಾಗ್ ಆಗಿಬಿಡುತ್ತದೆ. ಹೀಗಾಗಿ ಫೈಲ್ ಹೆಸರು ಬದಲಿಸಬೇಕಾಗಿಲ್ಲ. ಅದೇ ರೀತಿ, ಆಡಿಯೋ ಕ್ಲಿಪ್ ಶೇರ್ ಮಾಡುವುದು ಕೂಡ ಸುಲಭವಾಗಿದೆ.
ಪಕ್ವಗೊಂಡ ಸಿರಿ: ಧ್ವನಿ ಸಹಾಯಕನಂತೆ ಕೆಲಸ ಮಾಡುವ ಸಿರಿ ಆ್ಯಪ್ ಈಗ ಮತ್ತಷ್ಟು ಪಕ್ವಗೊಂಡಿದೆ, ವಿಶೇಷವಾಗಿ ಭಾರತೀಯ ವಾತಾವರಣಕ್ಕೆ ಪೂರಕವಾಗಿ ರೂಪುಗೊಂಡಿದೆ. ಆದರೆ, ಭಾಷಾಂತರದಲ್ಲಿ ಕನ್ನಡ ಸಹಿತ ಭಾರತೀಯ ಭಾಷೆಗಳನ್ನು ಇನ್ನೂ ಬೆಂಬಲಿಸುತ್ತಿಲ್ಲ.
ಅನಿಮೋಜಿ (ಆನಿಮೇಶನ್ ಇರುವ ಇಮೋಜಿಗಳು) ಮತ್ತು ಮೆಮೋಜಿ (ನಮ್ಮ ಮುಖವನ್ನೇ ಸೇರಿಸಿ ಇಮೋಜಿಗಳನ್ನು ಸೃಷ್ಟಿಸಿ, ಅದರ ಮೇಲೆ ಬರೆಯಬಲ್ಲ ಕಿರುಚಿತ್ರದ ವ್ಯವಸ್ಥೆ) ವೈಶಿಷ್ಟ್ಯಗಳು ಐಫೋನ್ ಎಕ್ಸ್, ಎಕ್ಸ್ಎಸ್ ಹಾಗೂ ಎಕ್ಸ್ಎಸ್ ಮ್ಯಾಕ್ಸ್ ಮಾಡೆಲ್‌ಗಳಿಗೆ ಮಾತ್ರ ಲಭ್ಯ. ಅಲ್ಲಿ ಲಭ್ಯವಿರುವ ಪಾತ್ರಗಳಿಗೆ ನಮ್ಮ ಮುಖ ಅಂಟಿಸಿ, ಬೇಕಾದಂತೆ ತಿದ್ದುಪಡಿ ಮಾಡಿ ಚಿತ್ರ ತಯಾರಿಸಿ ಕಳುಹಿಸುವ ವ್ಯವಸ್ಥೆ. ಐಫೋನ್ 5 ಎಸ್‌ನಲ್ಲಿ, ಫೋಟೋ/ವೀಡಿಯೊ ತೆಗೆದು, ಅದರ ಮೇಲೆ ಏನಾದರೂ ಬರೆದು ಕಳುಹಿಸಿದರೆ, ಆ ಬರವಣಿಗೆಯು ಆನಿಮೇಟೆಡ್ ಆಗಿ ಕಾಣಿಸುವ ಡಿಜಿಟಲ್ ಟಚ್ ಎಂಬ ವ್ಯವಸ್ಥೆಯಿದೆ.
ಉಳಿದಂತೆ, ಫೇಸ್‌ಟೈಮ್ ಎಂಬ ವೀಡಿಯೊ ಚಾಟಿಂಗ್ ವ್ಯವಸ್ಥೆಯಲ್ಲಿ 32 ಮಂದಿ ಆ್ಯಪಲ್ ಫೋನ್ ಬಳಕೆದಾರರೊಂದಿಗೆ ಏಕಕಾಲಕ್ಕೆ ಆನ್‌ಲೈನ್‌ನಲ್ಲಿ ಸಮೂಹ ಸಭೆ (ಆಂಡ್ರಾಯ್ಡ್‌ನಲ್ಲಿರುವ ಹ್ಯಾಂಗೌಟ್ಸ್‌ನಂತೆ) ನಡೆಸಬಹುದಾಗಿದೆ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…