ಆ್ಯಪಲ್ ಐಫೋನ್‌ನ 5ಎಸ್ ಬಳಿಕ ಆವೃತ್ತಿಗಳು ಈಗಾಗಲೇ ಐಒಎಸ್ 11ಕ್ಕೆ ಅಪ್‌ಗ್ರೇಡ್ ಆಗಿವೆ. ಅದರಲ್ಲಿ ಹೊಸದೊಂದು ಆಯ್ಕೆ ಗಮನ ಸೆಳೆದಿದೆ. ಅದೆಂದರೆ, ಸ್ಕ್ರೀನ್ ರೆಕಾರ್ಡಿಂಗ್. ನಮ್ಮ ಫೋನ್‌ನಲ್ಲಿ ನಾವು ಏನಾದರೂ ಮಾಡುತ್ತಿರುವಾಗ ಸಮಸ್ಯೆ ಕಾಣಿಸಿಕೊಂಡರೆ, ಆ ಸಮಸ್ಯೆಯೇನೆಂಬುದನ್ನು ದೂರದಲ್ಲೆಲ್ಲೋ ಇರುವ ಫೋನ್ ತಜ್ಞರಿಗೆ ತಿಳಿಸಿ, ಪರಿಹಾರ ಪಡೆದುಕೊಳ್ಳಲು ಈ ಸ್ಕ್ರೀನ್ ರೆಕಾರ್ಡರ್ ಸಹಾಯ ಮಾಡುತ್ತದೆ. ಇದರ ಶಾರ್ಟ್‌ಕಟ್ ಬಟನ್, ಫೋನ್ ಸ್ಕ್ರೀನ್‌ನ ಕೆಳಭಾಗದಿಂದ ಮೇಲಕ್ಕೆ ಸ್ವೈಪ್ ಮಾಡಿದಾಗ ಕಾಣಿಸಿಕೊಳ್ಳುವ ಕಂಟ್ರೋಲ್ ಸೆಂಟರ್‌ನಲ್ಲಿದೆ. ದೊಡ್ಡ ಚುಕ್ಕಿ ಇರುವ ಈ ಬಟನ್ ಒತ್ತಿದ ಬಳಿಕ 3 ಸೆಕೆಂಡುಗಳ ಕೌಂಟ್‌ಡೌನ್‌ನೊಂದಿಗೆ ಸ್ಕ್ರೀನ್ ರೆಕಾರ್ಡಿಂಗ್ ಆರಂಭವಾಗುತ್ತದೆ. ಇದು ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಮಾದರಿಯೇ. ಸ್ಕ್ರೀನ್‌ಶಾಟ್ ಫೋಟೋ ಆಗಿದ್ದರೆ, ಸ್ಕ್ರೀನ್ ರೆಕಾರ್ಡರ್ ವೀಡಿಯೋ ರೂಪದಲ್ಲಿರುತ್ತದೆ. ರೆಕಾರ್ಡ್ ಆಗುತ್ತಿರುವಾಗ ಮೇಲ್ಭಾಗದಲ್ಲಿ ಸ್ಟೇಟಸ್ ಬಾರ್ ಕೆಂಪು ಆಗಿರುತ್ತದೆ. ಆಫ್ ಮಾಡಿದಾಗ, ಕೆಂಪನೆಯ ಪಟ್ಟಿ ಮರೆಯಾಗುತ್ತದೆ.
ಇವನ್ನೂ ನೋಡಿ
ಲೀಲಾ ಬೈಪಾಡಿತ್ತಾಯರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
Karnataka State Yakshagana Academy Award for Leela Baipadithaya