ವಾಟ್ಸ್ಆ್ಯಪ್‌ನಲ್ಲಿ ಯಾವುದೇ ಸಂದೇಶದ ಪೂರ್ವಾಪರ ನೋಡದೆ ನಾವು ಒಳಿತು-ಕೆಡುಕು ವಿಚಾರಿಸದೆ ಬೇರೆ ಗ್ರೂಪುಗಳಿಗೆ, ತಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡುತ್ತಿರುತ್ತೇವೆ. ಇಂಥ ಸಂದರ್ಭದಲ್ಲಿ ಈ ಉತ್ತಮ ಲೇಖನಗಳು ಫಾರ್ವರ್ಡ್ ಮಾಡಿದವರೇ ಬರೆದಿದ್ದೋ ಎಂಬ ಗೊಂದಲ ಮೂಡುವುದು ಸಹಜ. ಅಥವಾ ಬೇರೆಯವರ ಲೇಖನವನ್ನೇ ತಮ್ಮವೆಂದು ಫಾರ್ವರ್ಡ್ ಮಾಡುವವರೂ ಇರುತ್ತಾರೆ. ಇದರೊಂದಿಗೆ ಸುಳ್ಳು ಸುದ್ದಿಗಳನ್ನು ಕೂಡ ಫಾರ್ವರ್ಡ್ ಮಾಡಲಾಗುತ್ತದೆ. ಗ್ರೂಪ್ ಸದಸ್ಯರು ಅದನ್ನು ತಮ್ಮ ಸ್ನೇಹಿತನೇ ಕಳುಹಿಸಿದ್ದು, ಹೀಗಾಗಿ ನಿಜವಾಗಿರಬಹುದೋ ಎಂಬ ಗೊಂದಲದಲ್ಲಿ ಸಿಲುಕುವುದು ಸಹಜ. ಇಂಥ ಗೊಂದಲಗಳನ್ನು ನಿವಾರಿಸುವುದಕ್ಕಾಗಿ ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸುತ್ತಿದೆ. ಅದೆಂದರೆ, ಫಾರ್ವರ್ಡ್ ಮಾಡಲಾದ ಸಂದೇಶದಲ್ಲಿ ‘ಫಾರ್ವರ್ಡೆಡ್ ಮೆಸೇಜ್’ ಎಂಬ ಲೇಬಲ್ ಇರುತ್ತದೆ. ಈ ವೈಶಿಷ್ಟ್ಯವು ಟೆಸ್ಟಿಂಗ್ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಎಲ್ಲರ ವಾಟ್ಸ್ಆ್ಯಪ್‌ನಲ್ಲೂ ಲಭ್ಯವಾಗಲಿದೆ. ಇದಕ್ಕಾಗಿ ನಮ್ಮಲ್ಲಿರುವ ವಾಟ್ಸ್ಆ್ಯಪ್ ತಂತ್ರಾಂಶವನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
ಇವನ್ನೂ ನೋಡಿ
66ಎ ರದ್ದಾಗಿದ್ದಕ್ಕೆ ಬೀಗಬೇಕಿಲ್ಲ; ಬೇರೆ ಕಾಯಿದೆಯಡಿ ಬಂಧಿಸಬಹುದು!
ಸಾಮಾಜಿಕ ಜಾಲತಾಣಗಳಲ್ಲಿ, ಆನ್ಲೈನ್ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾ.24ರಂದು ಸರ್ವೋಚ್ಚ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿ, ಕಾಮೆಂಟ್ಗೂ, ಅದನ್ನು ಲೈಕ್ ಮಾಡಿದ್ದಕ್ಕೂ ಬಂಧಿಸಲು ಅನುವು ಮಾಡಿಕೊಟ್ಟಿದ್ದ ಮಾಹಿತಿ ತಂತ್ರಜ್ಞಾನ ಕಾಯಿದೆಯ 66ಎ ವಿಧಿಯನ್ನು...