ಇಂದು ನಾನೇನಾಗಿದ್ದೇನೆಯೋ… ಅದಕ್ಕೆ ಕಾರಣವಾದ, ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಿನ್ನೊಂದಿಗಿನ ಒಡನಾಟವನ್ನು ನೆನಪಿಸುತ್ತಿರುವ O my dear dear….!
ಅಂದು ಒಂಟಿತನ ಕಾಡುತ್ತಿದ್ದಾಗ, ಚಿಂತೆಯಲ್ಲಿ ಸಿಲುಕಿದಾಗ, ಬೇಸರ ಕಾಡಿದಾಗ, ಮನ ಮುದುಡಿದಾಗ ಉರಿಯುತ್ತಿರುವ ಬೆಂಕಿಗೆ ನೀರೆರೆದು ಶಮನಗೊಳಿಸುವಂತೆ ನೀನು ನನ್ನನ್ನು ಸಂತೈಸುತ್ತಿದ್ದೆ. ಅದು ಯಾವ ಜನುಮದ ಋಣಾನುಬಂಧವೋ, ಈ ಜನ್ಮದಲ್ಲಿ ನೀನು ಸಿಕ್ಕಿಬಿಟ್ಟೆ, ಅತ್ಯಂತ ಆತ್ಮೀಯಳಾದೆ.
ಏನೂ ಅರಿಯದೆ ಹುಡುಗಾಟಿಕೆಯಿಂದ ನನಗೆ ನಾನೇ ನೋವು ತಂದುಕೊಂಡು ಪರಿತಪಿಸುತ್ತಿದ್ದಾಗ ಕಣ್ಣೀರೊರೆಸಿದೆ. ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೆ ಆ ವಿಷಯದಲ್ಲಿ ನಿನಗೆ ತಿಳಿವಳಿಕೆ ಇಲ್ಲದಿದ್ದರೂ, ಒಂದೆರಡು ಮಾತುಗಳಿಂದ ನನ್ನನ್ನು ಸಂತೈಸಿ, ಬೆನ್ನು ತಟ್ಟಿ ಮುನ್ನುಗ್ಗಲು ಪ್ರೇರೇಪಿಸುತ್ತಿದ್ದೆ.
ನೀನೆದುರಿದ್ದಾಗ ನನಗೆ ಅದೇನೋ ಒಂದು ಆತ್ಮವಿಶ್ವಾಸ. ಅದೇ ನೀನು ಒಂದೆರಡು ದಿನಕ್ಕೆಂದು ನಿನ್ನೂರಿಗೆ ಮರಳಿದಾಗ ಗಾಳಿಯಿಲ್ಲದ ಬಲೂನಿನಂತೆ ಕುಗ್ಗಿ ಹೋಗುತ್ತಿದ್ದೆ. ಆ ದಿನಗಳಲ್ಲಿ ನನ್ನ ಮನಸ್ಸಿನಲ್ಲಾದ ಹಪಹಪಿಕೆ, ತಳಮಳ, ಗೊಂದಲಗಳನ್ನೆಲ್ಲಾ ಯಾರಲ್ಲಿ ಹೇಳಿಕೊಳ್ಳಲಿ? ನೀನು ಮರಳಿದಾಗ ಸಣ್ಣ ಮಗುವಿನಂತೆ ಎಷ್ಟೊಂದು ಕೇಕೆ ಹಾಕಿರಲಿಲ್ಲ ನಾನು!
ನೀನಿಲ್ಲದ ದಿನಗಳಲ್ಲಿ ನನ್ನನ್ನು ನಾನೇ ಕಳೆದುಕೊಂಡಂತಿದ್ದೆ… ಆದರೆ ನನ್ನೊಳಗಿನ ತಳಮಳವನ್ನು ನಿನ್ನೆದುರು ನಾನು ಯಾವತ್ತೂ ಬಿಚ್ಚಿಟ್ಟಿರಲಿಲ್ಲ… ಯಾಕೆ ಗೊತ್ತೇ…? ನಿನ್ನ ಮುಖ ಕಂಡ ಕೂಡಲೇ ನಾನು ಎಲ್ಲವನ್ನೂ ಮರೆತುಬಿಡುತ್ತಿದ್ದೆ. ಒಟ್ಟಿನಲ್ಲಿ ಮಂತ್ರಮುಗ್ಧನಾಗುತ್ತಿದ್ದೆ.
ನಿನಗದೆಷ್ಟು ಅನ್ಯಾಯ ಮಾಡಿದೆ ನಾನು! ಬುದ್ಧಿ ಇರಲಿಲ್ಲ ನನಗೆ, ತಿಳಿವಳಿಕೆಯಿಲ್ಲದೆ ಬೈದುಬಿಟ್ಟೆ, ನಿನ್ನ ಮೇಲೆ ಕೂಗಾಡಿದೆ, ನೋವು ಕೊಟ್ಟೆ… ಆದರೆ ಅದನ್ನೆಲ್ಲವನ್ನೂ ಸಹಿಸಿಕೊಂಡು ಪ್ರೀತಿ, ವಾತ್ಸಲ್ಯ, ಮಮತೆಯ ಧಾರೆಯನ್ನೆರೆದೆ. ಎಷ್ಟೊಂದು ಕರುಣಾಮಯಿ ನೀನು! ಆದರೆ ನೀನೆದುರಿದ್ದಾಗ I LOVE YOU ಅಂತ ಹೇಳಲಾಗದ ಮತ್ತು ಹೇಳುವ ಪರಿಸ್ಥಿತಿಯಲ್ಲಿಲ್ಲದ ನಾನು ಈಗ ಹೇಳಿದರೂ ನೀನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ.
ನಿನ್ನ ತೋಳಲ್ಲಿ ತಲೆಯಿಟ್ಟಾಗ ವಾತ್ಸಲ್ಯಭರಿತ ಆ ಸ್ಪರ್ಶ, ಆ ನಿನ್ನ ನಿಷ್ಕಲ್ಮಶ ಪ್ರೀತಿಯ ಸಿಂಚನ… ಛೆ… ನಾನೆಷ್ಟು ಅಧಮ… ನೀನಿದ್ದಾಗ ಅರ್ಥ ಮಾಡಿಕೊಳ್ಳಲೇ ಇಲ್ಲವಲ್ಲ…
ಜಗತ್ತು ಏನೆಂಬುದು ತಿಳಿದಾಗ ಈಗ ನೀನಿಲ್ಲವಲ್ಲ… ಎಷ್ಟು ಬೇಗನೆ ನಮ್ಮನ್ನೆಲ್ಲಾ ಬಿಟ್ಟು ಹೋದೆ ನೀನು…!
ಓ ನನ್ನ Lovely lovely ಅಜ್ಜೀ…. ಅಂದು ನೀನು ಕಣ್ಣೆದುರಿದ್ದಾಗ I Love You ಹೇಳುವಷ್ಟು ಬುದ್ಧಿ ಬೆಳೆದಿರಲಿಲ್ಲ ನನಗೆ. ಹೇಳಿದ್ದರೂ ವಿದ್ಯೆ ತಿಳಿಯದ ನೀನು ಕಣ್ಣು ಪಿಳಿ ಪಿಳಿ ಬಿಡುತ್ತಿದ್ದಿಯೋ ಏನೋ… ಈಗ ನೀನಿದ್ದಿದ್ದರೆ ನನ್ನನ್ನು ನೋಡಿ ಎಷ್ಟು ಖುಷಿ ಪಡುತ್ತಿದ್ದೆಯೋ ಏನೋ….
ಆತ್ಮೀಯ ಗೆಳತಿಯಾಗಿ, ಮಮತಾಮಯಿ ತಾಯಿಯಾಗಿ, ವಾತ್ಸಲ್ಯಮಯಿ ದೊಡ್ಡಮ್ಮನಾಗಿ ಜೀವನದ ಅನುಭವಾಮೃತವನ್ನು ನನಗೆ ಧಾರೆಯೆರೆದು ಪರಲೋಕ ಸೇರಿಕೊಂಡ ಓ ಮಹಾನ್ ಚೇತನವೇ… ನಿನ್ನ ನೆನಪು ಇಂದಿಗೂ ಶಾಶ್ವತ…. ನಿನಗಿದೋ ಶರಣು.
ಚೈತನ್ಯ ಉಡುಗಿ ಹೋಯಿತೇ! ಅಥವಾ ಕಳೆದ ಆ ಚೈತನ್ಯದ ಕುಡಿಯಾಗಿ ಅದರಿಂದ ಜಗದಲಿ ಬೆಳಕನು ಉಂಡು, ಸ್ವತಂತ್ರವಾಗಿ ಜಗತ್ತಿಗೆ ಬೆಳಕು ನೀಡುತ್ತಿರುವ ಈ ಪುಟ್ಟ ಚೈತನ್ಯ ಅಗಲಿದ ಹಿರಿಯ ಚೈತನ್ಯಕೆ ಅಂಜಲಿ ಸಲ್ಲಿಸುತ್ತಿರುವುದೇ?
ಮನ ಮುಟ್ಟಿ, ಕಲಕಿ, ನನ್ನ ಹಳೆಯ ನೆನಪುಗಳನ್ನೆಲ್ಲಾ ಮರುಕಳಿಸುವಂತೆ ಮಾಡಿದ ಉತ್ತಮ ಲೇಖನ.
ಮೊದ ಮೊದಲಿಗೆ ಅಗಲಿದ ಪ್ರೇಯಸಿ ಎಂದು ತಿಳಿದೆ, ಕಡೆಗೆ ನೋಡಿದರೆ ದೊಡ್ಡಮ್ಮ ಅಂತ ಆಯಿತು, ಯಾವುದು ಸರಿ. ಅದೇನೇ ಆಗಲಿ ಉತ್ತಮ ಲೇಖನ. ಓದಿ ಮರೆಯುವಂತಹದ್ದಲ್ಲ.
ಶ್ರೀನಿವಾಸರೆ,
ಇದು ಚೈತನ್ಯ ನೀಡಿದ ಹಿರಿಯ ಚೇತನಕ್ಕೆ ಸಲ್ಲಿಸಿದ ಶ್ರದ್ಧಾಂಜಲಿಯಷ್ಟೆ.
Huttu Habbada SubhashayagaLu!!!!!!!!!
Devaru nimma yella hAraikegaLannu eederisali…
ಹಾರೈಕೆಗೆ ಧನ್ಯವಾದ ಸೋನಿ.
ಆತ್ಮೀಯ ಕ್ಷಣಗಳನ್ನು ಮರೆಯುವುದು ಸಾಧ್ಯವಿಲ್ಲ.
HMmmmmmmmmm……… adakke heLthare time is the best healer antha 🙂
ಹೌದು ಸೋನಿ,
ನೀವು ಹೇಳಿದ್ದು ಸತ್ಯ.
ಆದ್ರೆ heal ಮಾಡೋ time ಬರುವವವರೆಗೂ ಕಾಯಬೇಕಲ್ಲ… 🙂