ಸೌದಿ ಅರೇಬಿಯಾದಲ್ಲಿ ಹೊಸದೊಂದು ಕಾನೂನು ಕಳೆದ ವಾರ ಜಾರಿಗೆ ಬಂದಿದೆ. ಸಂಗಾತಿಯ ಮೊಬೈಲ್ ಫೋನ್ ಕದ್ದು ನೋಡುವುದು (ಸ್ಪೈ ಮಾಡುವುದು) ಕ್ರಿಮಿನಲ್ ಅಪರಾಧ. ಇದಕ್ಕೆ ಭಾರೀ ದಂಡ ತೆರಬೇಕಾಗಬಹುದು ಮತ್ತು ಒಂದು ವರ್ಷ ಜೈಲಿಗೂ ಹೋಗಬಹುದು. ಇದಕ್ಕೆ ತೆರಬೇಕಾಗಿರುವ ದಂಡದ ಪ್ರಮಾಣವೆಷ್ಟು ಗೊತ್ತೇ? 5 ಲಕ್ಷ ಸೌದಿ ರಿಯಲ್ಸ್ (ಅಂದರೆ ಸುಮಾರು 87 ಲಕ್ಷ ರೂ.). ಕಳೆದ ವಾರದಿಂದ ಅಲ್ಲಿ ಈ ಸೈಬರ್-ಕ್ರೈಮ್ ನಿರೋಧಕ ಕಾನೂನು ಜಾರಿಗೊಳಿಸಲಾಗಿದ್ದು, ಇದು ವ್ಯಕ್ತಿಗಳ ನೈತಿಕತೆಯನ್ನು ಹಾಗೂ ಖಾಸಗಿತನವನ್ನು ರಕ್ಷಿಸುವ ಉದ್ದೇಶ ಹೊಂದಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ಬ್ಲ್ಯಾಕ್‍ಮೇಲ್, ಮಾನಹಾನಿ, ದುರುಪಯೋಗ ಮುಂತಾದ ಸೈಬರ್ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೌದಿಯಲ್ಲಿ ಈ ಕಾನೂನು ಜಾರಿಗೊಳಿಸಲಾಗಿದೆ. ಸೆಲ್‌ಫೋನ್ ಜತೆಗೆ ಸಾಮಾಜಿಕ ಜಾಲತಾಣ ಬಳಕೆದಾರರ ಗರಿಷ್ಠ ಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಕೂಡ ಒಂದಾಗಿದೆ. ಭಾರತದಲ್ಲೂ ಆ್ಯಪ್ ದುರುಪಯೋಗ ಹೆಚ್ಚಾದರೆ ಇಂಥ ಕಾನೂನು ಬರಬಹುದೇ?
ಇವನ್ನೂ ನೋಡಿ
ಟ್ಯಾಬ್ಲೆಟ್ ಅಥವಾ ಲ್ಯಾಪ್ಟಾಪ್: ಯಾವುದು ಕೊಳ್ಳುವುದೆಂಬ ಗೊಂದಲವೇ?
ಡೆಸ್ಕ್ಟಾಪ್ ಬದಲು ಲ್ಯಾಪ್ಟಾಪ್ ಖರೀದಿಗೆ ನೀವು ಮನಸ್ಸು ಮಾಡಿದ್ದರೆ, ಹೆಚ್ಚು ಹಣ ತೆರುವ ಬದಲು ಟ್ಯಾಬ್ಲೆಟ್ಗಳನ್ನೇಕೆ ಕೊಳ್ಳಬಾರದು ಅಂತ ಯೋಚಿಸಿದ್ದೀರಾ? ಹಾಗಿದ್ದರೆ ಲ್ಯಾಪ್ಟಾಪ್ ಅಥವಾ ಟ್ಯಾಬ್ಲೆಟ್ಗಳ ಸೌಕರ್ಯಗಳು ಮತ್ತು ಇತಿಮಿತಿಗಳ ಬಗ್ಗೆ ಬೆಳಕು...