ಸೌದಿ ಅರೇಬಿಯಾದಲ್ಲಿ ಹೊಸದೊಂದು ಕಾನೂನು ಕಳೆದ ವಾರ ಜಾರಿಗೆ ಬಂದಿದೆ. ಸಂಗಾತಿಯ ಮೊಬೈಲ್ ಫೋನ್ ಕದ್ದು ನೋಡುವುದು (ಸ್ಪೈ ಮಾಡುವುದು) ಕ್ರಿಮಿನಲ್ ಅಪರಾಧ. ಇದಕ್ಕೆ ಭಾರೀ ದಂಡ ತೆರಬೇಕಾಗಬಹುದು ಮತ್ತು ಒಂದು ವರ್ಷ ಜೈಲಿಗೂ ಹೋಗಬಹುದು. ಇದಕ್ಕೆ ತೆರಬೇಕಾಗಿರುವ ದಂಡದ ಪ್ರಮಾಣವೆಷ್ಟು ಗೊತ್ತೇ? 5 ಲಕ್ಷ ಸೌದಿ ರಿಯಲ್ಸ್ (ಅಂದರೆ ಸುಮಾರು 87 ಲಕ್ಷ ರೂ.). ಕಳೆದ ವಾರದಿಂದ ಅಲ್ಲಿ ಈ ಸೈಬರ್-ಕ್ರೈಮ್ ನಿರೋಧಕ ಕಾನೂನು ಜಾರಿಗೊಳಿಸಲಾಗಿದ್ದು, ಇದು ವ್ಯಕ್ತಿಗಳ ನೈತಿಕತೆಯನ್ನು ಹಾಗೂ ಖಾಸಗಿತನವನ್ನು ರಕ್ಷಿಸುವ ಉದ್ದೇಶ ಹೊಂದಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ಬ್ಲ್ಯಾಕ್‍ಮೇಲ್, ಮಾನಹಾನಿ, ದುರುಪಯೋಗ ಮುಂತಾದ ಸೈಬರ್ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೌದಿಯಲ್ಲಿ ಈ ಕಾನೂನು ಜಾರಿಗೊಳಿಸಲಾಗಿದೆ. ಸೆಲ್‌ಫೋನ್ ಜತೆಗೆ ಸಾಮಾಜಿಕ ಜಾಲತಾಣ ಬಳಕೆದಾರರ ಗರಿಷ್ಠ ಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಕೂಡ ಒಂದಾಗಿದೆ. ಭಾರತದಲ್ಲೂ ಆ್ಯಪ್ ದುರುಪಯೋಗ ಹೆಚ್ಚಾದರೆ ಇಂಥ ಕಾನೂನು ಬರಬಹುದೇ?
ಇವನ್ನೂ ನೋಡಿ
Samsung Galaxy Buds 2 Pro: ಸುಧಾರಿತ ವಿನ್ಯಾಸ, ಉತ್ತಮ ಧ್ವನಿ
Samsung Galaxy Buds 2 Pro: ಹಿತವಾದ ಧ್ವನಿ, ಹಗುರ ಮತ್ತು ಕಿವಿಯೊಳಗೆ ಗಟ್ಟಿಯಾಗಿ ಕೂರುವ ವಿನ್ಯಾಸದಿಂದ ಗಮನ ಸೆಳೆಯುತ್ತದೆ.