ಹಲವಾರು ಇಂಟರ್ನೆಟ್ ಸರ್ವಿಸ್ ಪ್ರೊವೈಡರುಗಳು 10, 20 ಎಂಬಿಪಿಎಸ್ (ಸೆಕೆಂಡಿಗೆ 10/20 ಎಂಬಿ ಡೌನ್‌ಲೋಡ್ ಆಗುವ ಸ್ಪೀಡ್) ಅಂತೆಲ್ಲಾ ಜಾಹೀರಾತು ನೀಡುತ್ತಿವೆ. ಆದರೆ, ಇದು ನಿಜವಾಗಿಯೂ ಅಷ್ಟೇ ಇರುತ್ತದೆಯೇ? ಇಂಟರ್ನೆಟ್ ಸ್ಪೀಡ್ ಚೆಕ್ ಮಾಡಲು ಸಾಕಷ್ಟು ವೆಬ್ ತಾಣಗಳಿವೆ. ಸೂಪರ್‌ಫಾಸ್ಟ್ 200 ಎಂಬಿಪಿಎಸ್ ಸ್ಪೀಡ್ ಇದೆ ಅಂತ ಹೇಳಿದ ಕಂಪನಿಯೂ ಸರಾಸರಿ 52 ಎಂಬಿಪಿಎಸ್ ಮಾತ್ರವೇ ವೇಗದ ಇಂಟರ್ನೆಟ್ ಸೇವೆ ಒದಗಿಸಿದೆ ಎಂದು ಇಂಟರ್ನೆಟ್ ವೇಗ ತೋರಿಸುವ ವೆಬ್‌ಸೈಟಿನ ವರದಿಯೊಂದು ಹೇಳಿದೆ. 38 ಎಂಬಿಪಿಎಸ್ ಎಂದು ಹೇಳಿಕೊಂಡ ಕಂಪನಿಯ ಇಂಟರ್ನೆಟ್ ವೇಗ ಒದಗಿಸಿದ್ದು ಸರಾಸರಿ 19 ಎಂಬಿಪಿಎಸ್ ಮಾತ್ರ ಎಂದು 2.35 ಲಕ್ಷ ಮಂದಿ ಬಳಕೆದಾರರು ಮಾಡಿದ ಟೆಸ್ಟ್ ಆಧಾರದಲ್ಲಿ ವರದಿಯೊಂದು ಪ್ರಕಟವಾಗಿದೆ. ಜಾಹೀರಾತುಗಳಲ್ಲಿ ಉದಾಹರಣೆಗೆ, 10 ಎಂಬಿಪಿಎಸ್”ವರೆಗೆ” ಎಂದು ನಮೂದಿಸಿ, ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂಬುದು ಈ ವರದಿಯಿಂದ ವ್ಯಕ್ತವಾದ ಅಂಶ. ನಿಮ್ಮ ಕಂಪ್ಯೂಟರಿನಲ್ಲಿ ಇಂಟರ್ನೆಟ್ ಸ್ಪೀಡ್ ಎಷ್ಟಿದೆ ನೋಡಬೇಕೇ? ತಿಳಿಯಲು http://www.speedtest.net/ ಎಂಬಲ್ಲಿ ಹೋಗಿ ‘ಗೋ’ ಬಟನ್ ಒತ್ತಿ. ಅಪ್‌ಲೋಡ್ ಎಷ್ಟು, ಡೌನ್‌ಲೋಡ್ ಎಷ್ಟು ವೇಗ ಎಂದು ತೋರಿಸಲಾಗುತ್ತದೆ.
ಇವನ್ನೂ ನೋಡಿ
ನಿಮ್ಮ ಜಿ-ಮೇಲ್ಗೆ ಬೇರೆ ಯಾರಾದ್ರೂ ಲಾಗಿನ್ ಆಗಿದ್ದಾರೆಯೇ ಅಂತ ತಿಳಿಯಿರಿ
ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ - 32 (ಏಪ್ರಿಲ್ 15, 2013)ಅತ್ಯಂತ ಮಹತ್ವದ, ಸೂಕ್ಷ್ಮ ಮಾಹಿತಿಗಳಿರುವ ಇಮೇಲ್ ಖಾತೆಯನ್ನು ಉಪಯೋಗಿಸುವಾಗ ಸಾಕಷ್ಟು ಎಚ್ಚರ ವಹಿಸುವುದು ಅಗತ್ಯ. ಗೂಗಲ್ ಮೇಲ್ ಅಥವಾ ಜಿ-ಮೇಲ್ ಬಳಸುತ್ತಿರುವವರಿಗೆ ಒಂದು...


