ನಿಮ್ಮ ಮೊಬೈಲ್ ಫೋನ್‌ನಲ್ಲಿ ಫೇಸ್‌ಬುಕ್ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದೀರಿ. ಬ್ರೌಸ್ ಮಾಡುತ್ತಾ ಹೋದಂತೆ ಹೆಚ್ಚು ಹೆಚ್ಚು ವೀಡಿಯೋಗಳೇ ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲ, ಅವುಗಳು ಸ್ವಯಂಚಾಲಿತವಾಗಿ ಪ್ಲೇ ಕೂಡ ಆಗಿಬಿಡುತ್ತವೆ. ಇದಕ್ಕೆ ಹೆಚ್ಚಿನ ಡೇಟಾ (ನೆಟ್ ಪ್ಯಾಕ್) ಬೇಕಾಗುತ್ತದೆ, ಬ್ಯಾಟರಿಯೂ ಬೇಗನೇ ಖಾಲಿಯಾಗುತ್ತದೆ. ಇದನ್ನು ತಡೆಯಲು, ಫೇಸ್‌ಬುಕ್ ಆ್ಯಪ್ ತೆರೆದಾಗ ಮೂರು ಗೆರೆಗಳುಳ್ಳ ಸೆಟ್ಟಿಂಗ್ಸ್ ಬಟನ್ ಕ್ಲಿಕ್ ಮಾಡಿ. ಬಳಿಕ ಕೆಳಗೆ ಬ್ರೌಸ್ ಮಾಡುತ್ತಾ ಹೋಗಿ. ಆ್ಯಪ್ ಸೆಟ್ಟಿಂಗ್ಸ್ ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ಒತ್ತಿದಾಗ, ಒಂದಿಷ್ಟು ಕೆಳಗೆ ಆಟೋ-ಪ್ಲೇ ಎಂಬ ಬಟನ್ ಕಾಣಿಸುತ್ತದೆ. ಒತ್ತಿ, Never Auto-play Videos ಆಯ್ಕೆ ಮಾಡಿಕೊಳ್ಳಿ. ಇನ್ನು ಫೇಸ್‌ಬುಕ್ ಬ್ರೌಸ್ ಮಾಡಿದರೆ, ವೀಡಿಯೋಗಳೂ ಕಡಿಮೆ ಕಾಣಿಸುತ್ತವೆ ಮತ್ತು ಸ್ವಯಂಚಾಲಿತವಾಗಿ ಪ್ಲೇ ಕೂಡ ಆಗುವುದಿಲ್ಲ.
ಇವನ್ನೂ ನೋಡಿ
ಆ್ಯಪಲ್ iPhone 14 ವಿಮರ್ಶೆ: ವೇಗ, ಹಗುರ, ಉತ್ತಮ ಕ್ಯಾಮೆರಾ
ಉತ್ತಮ ಸ್ಕ್ರೀನ್, ವೇಗದ ಕಾರ್ಯಾಚರಣೆ, ಸುಲಲಿತವಾದ ತಂತ್ರಾಂಶ ಮತ್ತು ಅತ್ಯುತ್ತಮ ಕ್ಯಾಮೆರಾ - ಈ ವೈಶಿಷ್ಟ್ಯಗಳು iPhone 14ನ್ನು ಖರೀದಿಸುವವರ ಗಮನ ಸೆಳೆಯಬಲ್ಲವು.