ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಫೋಟೋಗಳನ್ನೆಲ್ಲ ನೀವು ಫೇಸ್‌ಬುಕ್‌ಗೆ ಈಗಾಗಲೇ ಅಪ್‌ಲೋಡ್ ಮಾಡಿದ್ದೀರಿ. ಅದರಲ್ಲಿ ಮದುವೆಯದ್ದೋ, ಬರ್ತಡೇ ಪಾರ್ಟಿಯದ್ದೋ ಅಥವಾ ಬೇರಾವುದಾದರೂ ಕಾರ್ಯಕ್ರಮದ್ದೋ ಫೋಟೋಗಳಿರಬಹುದು. ಆದರೆ, ಆವತ್ತು ಫೋಟೋ ತೆಗೆದಿದ್ದ ಫೋನ್ ನಿಮ್ಮ ಬಳಿ ಈಗಿಲ್ಲ. ಯಾವುದೋ ಕಾರಣಕ್ಕೆ ಅದನ್ನು ‘ಫ್ಯಾಕ್ಟರಿ ರೀಸೆಟ್’ ಮಾಡಬೇಕಾಗಿಬಂದಿದೆ ಅಥವಾ ಅದನ್ನು ಬದಲಾಯಿಸಿರುತ್ತೀರಿ. ಹೀಗಾದಾಗ ಆ ಫೋಟೋಗಳೂ ಹೋಗಿಬಿಟ್ಟಿವೆ. ಅವುಗಳು ಮತ್ತೆ ನಿಮಗೆ ಬೇಕೆಂದಾದರೆ ಈ ಚಿತ್ರಗಳನ್ನೆಲ್ಲ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಂತ ಗೊತ್ತೇ? ಒಂದು ನಿರ್ದಿಷ್ಟ ಕಾರ್ಯಕ್ರಮದ ಹಲವಾರು ಫೋಟೋಗಳಿದ್ದರೆ ಅವುಗಳನ್ನು ಆಲ್ಬಂ ರೂಪದಲ್ಲಿ ಅಪ್‌ಲೋಡ್ ಮಾಡಿಟ್ಟುಕೊಂಡಿದ್ದರೆ ಇದು ಮತ್ತೂ ಸುಲಭ. ಆ ಆಲ್ಬಂ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್ಸ್ ಬಟನ್‌ನಲ್ಲಿ ‘ಡೌನ್‌ಲೋಡ್ ಆಲ್ಬಂ’ ಎಂಬುದನ್ನು ಒತ್ತಿದಾಗ, ಕೆಲ ಕ್ಷಣಗಳಲ್ಲಿ ಎಲ್ಲ ಫೋಟೋಗಳೂ ಝಿಪ್ ರೂಪದಲ್ಲಿ ಡೌನ್‌ಲೋಡ್ ಆಗುತ್ತವೆ. ಅವುಗಳನ್ನು ನಮಗೆ ಬೇಕಾದಲ್ಲಿಗೆ ವರ್ಗಾಯಿಸಿಕೊಳ್ಳಬಹುದು.
ಇವನ್ನೂ ನೋಡಿ
ಬನ್ನಿ, ಅವಕಾಶವಾದಿಗಳು, ಸಮಯ ಸಾಧಕರಾಗೋಣ!
ಉದಯ ಗಗನದಲಿ ಅರುಣನ ಛಾಯೆ
ಜಗದ ಜೀವನಕೆ ಚೇತನವೀಯೆ
-ಕುವೆಂಪು ಹೊಸದೊಂದು ಅರುಣೋದಯವಾಗುತ್ತಿದೆ. 2010ರ ದುಗುಡ ದುಮ್ಮಾನಗಳು ಕಳೆದು 2011 ಹಿಂದಿಗಿಂತ ಚೆನ್ನಾಗಿರಲಪ್ಪಾ, ಕಳೆದುಹೋದ ವರುಷದ ಒಳ್ಳೆಯ ಸಂಗತಿಗಳು ಮುಂದುವರಿಯಲಪ್ಪಾ ಎಂದು ನಾವು ನಂಬಿದ ದೇವರನ್ನು ಪ್ರಾರ್ಥಿಸುತ್ತಲೇ...