ಫೇಸ್‌ಬುಕ್ ಮೆಸೆಂಜರ್ ಬಳಸುತ್ತಿರುವವರಿಗೆ ಗೊತ್ತಿದೆ. ಯಾವುದಾದರೂ ಸಂದೇಶ ಬಂದಾಗ ಚಾಟ್ ಹೆಡ್‌ಗಳೆಂಬ ಸ್ಮಾರ್ಟ್ ಗುಳ್ಳೆಗಳು ಸ್ಮಾರ್ಟ್ ಫೋನ್‌ನ ಸ್ಕ್ರೀನ್ ಮೇಲೆ ಬಂದು ಕೂರುತ್ತವೆ. ತೀರಾ ಕಡಿಮೆ ಎಂದಾದರೆ ಪರವಾಗಿಲ್ಲ. ಆದರೆ, ಏನಾದರೂ ಟೈಪ್ ಮಾಡುತ್ತಿರುವಾಗ ಇವುಗಳು ಕೈಯ ಬೆರಳುಗಳಿಗೆ ಅಡ್ಡ ಬಂದು ಕಿರಿಕಿರಿ ಮಾಡುತ್ತವೆ. ಅದನ್ನು ಎಳೆದು ಕೆಳಗೆ ಎಕ್ಸ್ ಗುರುತಿಗೆ ತಂದರೆ ಅಲ್ಲಿಂದ ಸರಿದು ಹೋಗುತ್ತವೆಯಾದರೂ, ಮತ್ತೆ ಸಂದೇಶ ಬಂದಾಗ ಮರಳಿ ಬರುತ್ತವೆ. ಇವುಗಳನ್ನು ಡಿಸೇಬಲ್ ಮಾಡುವುದು ಹೇಗೆ? ಮೆಸೆಂಜರ್ ಆ್ಯಪ್ ತೆರೆಯಿರಿ. ಬಲ ಮೇಲ್ಭಾಗದ ತುದಿಯಲ್ಲಿ ನಿಮ್ಮ ಪ್ರೊಫೈಲ್ ಗುಳ್ಳೆಯ ಮೇಲೆ ಕ್ಲಿಕ್ ಮಾಡಿ, ಒಂದಿಷ್ಟು ಕೆಳಗೆ ಸ್ಕ್ರಾಲ್ ಮಾಡಿದಾಗ, ಚಾಟ್ ಹೆಡ್ಸ್ ಎಂದು ಬರೆದಿರುವ ಸ್ಲೈಡ್ ಬಟನ್ ಆನ್ ಇದ್ದುದನ್ನು ಆಫ್‌ಗೆ ಸ್ಲೈಡ್ ಮಾಡಿಬಿಡಿ. ಮತ್ತೆಂದೂ ಚಾಟ್ ಹೆಡ್‌ಗಳ ಕಿರಿಕಿರಿ ಇರುವುದಿಲ್ಲ.
ಇವನ್ನೂ ನೋಡಿ
ಒಂದೇ ಫೋನ್ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?
ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್ಗೆ ಹೊಸ ಅಪ್ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು ಏಕಕಾಲದಲ್ಲಿ ನಿಭಾಯಿಸಲು ಅನುವು ಮಾಡಿಕೊಟ್ಟಿದೆ.