ವಾಟ್ಸಾಪ್ ಬಳಸುತ್ತಿರುವವರು ಸ್ನೇಹಿತರ ಜತೆಗಿನ ಚಾಟ್ ಸಂದೇಶಗಳನ್ನೋ, ಗ್ರೂಪ್ ಸಂದೇಶಗಳನ್ನೋ ‘ಕ್ಲಿಯರ್ ಆಲ್’ ಎಂಬ ಆಯ್ಕೆ ಬಳಸಿ ಡಿಲೀಟ್ ಮಾಡಬಹುದೆಂಬುದು ಹೆಚ್ಚಿನವರಿಗೆ ಗೊತ್ತು. ನಿರ್ದಿಷ್ಟವಾದ ಸಂದೇಶ ತೆರೆದು, ಬಲ ಮೇಲ್ಭಾಗದಲ್ಲಿ ಮೂರು ಚುಕ್ಕಿಗಳ ಬಟನ್ ಒತ್ತಿ, ‘ಮೋರ್’ ಒತ್ತಿ, ‘ಕ್ಲಿಯರ್ ಚಾಟ್’ ಮಾಡಿದರೆ ಎಲ್ಲ ಸಂದೇಶಗಳು ಡಿಲೀಟ್ ಆಗುತ್ತವೆ. ಅದೇ ರೀತಿ, ಎಲ್ಲ ಚಾಟ್ ಹಿಸ್ಟರಿಯೂ ಬೇಡವೆಂದಾದರೆ, ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿ, ಚಾಟ್ಸ್ ಎಂಬಲ್ಲಿ ಹೋಗಿ, ‘ಚಾಟ್ ಹಿಸ್ಟರಿ’ ಕ್ಲಿಕ್ ಮಾಡಿ, ಕ್ಲಿಯರ್ ಅಥವಾ ಡಿಲೀಟ್ ಮಾಡಲು ಆಯ್ಕೆಯಿದೆ. ಹೀಗೆ ಮಾಡುವಾಗ, ಪಾಪ್-ಅಪ್ ವಿಂಡೋದಲ್ಲಿ, ಸ್ಟಾರ್ ಗುರುತು ಹಾಕಿರುವ ಮೆಸೇಜ್‌ಗಳನ್ನು ಡಿಲೀಟ್ ಮಾಡಲಾಗುವುದಿಲ್ಲ ಮತ್ತು ನಿಮ್ಮ ಸಾಧನದಲ್ಲಿರುವ (ವಾಟ್ಸಾಪ್ ಮೂಲಕ ಡೌನ್‌ಲೋಡ್ ಆಗಿರುವ) ಫೈಲುಗಳನ್ನು ಡಿಲೀಟ್ ಮಾಡಲಾಗುತ್ತದೆ ಎಂಬ ಎರಡು ಸಂದೇಶಗಳಿಗೆ ಟಿಕ್ ಗುರುತು ಇರುತ್ತವೆ. ಸರಿಯಾಗಿ ಗಮನಿಸಿಯೇ ಡಿಲೀಟ್ ಮಾಡಿಬಿಡಿ. ಇಲ್ಲವಾದಲ್ಲಿ, ಅಮೂಲ್ಯ ಫೋಟೋ, ವೀಡಿಯೋ ಫೈಲುಗಳು ಡಿಲೀಟ್ ಆಗಬಹುದು.
ಇವನ್ನೂ ನೋಡಿ
ಗುರಿಯಿಲ್ಲದ ಮನಕೆ ದಾರಿ ತೋರುವ ಗುರು
ಇಂದು ಶಿಕ್ಷಕರ ದಿನ. ಈ ಲೇಖನ ವೆಬ್ ದುನಿಯಾ ಕನ್ನಡ ತಾಣದಲ್ಲಿ ಇಲ್ಲಿ ಪ್ರಕಟವಾಗಿದೆ. ಗುರು ಎಂಬ ಶಬ್ದ ಎಷ್ಟೊಂದು ಪಾವನವಾದುದು ಮತ್ತು ಗೌರವಯುತವಾದುದು ಎಂದರೆ ಇದನ್ನು ಕೇಳಿದ ತಕ್ಷಣವೇ ಶಿಷ್ಯರ ತಲೆ ಗೌರವದಿಂದ...




