ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂಬ ಬಗ್ಗೆ ಸಂದೇಹವಿದೆಯೇ? ಅಥವಾ ಪಾಸ್‌ವರ್ಡ್ ರೀಸೆಟ್ ಮಾಡಲು ನೀವು ಕೋರಿಕೆ ಸಲ್ಲಿಸದಿದ್ದರೂ, ನಿಮ್ಮ ಮೊಬೈಲ್ ಫೋನ್‌ಗೆ ಸಂದೇಶ OTP ಬಂದಿದೆಯೇ? ಬೇರೆಯವರು ನಿಮ್ಮ ಖಾತೆಯನ್ನು ಬಳಸಿದ್ದಾರೆಂಬ ಶಂಕೆ ಬಂತೇ? ಬೇರೆ ಯಾರಾದರೂ ನಿಮ್ಮ ಹೆಸರು, ನಿಮ್ಮ ಫೋಟೋ ಬಳಸಿ ತಮ್ಮದೇ ಖಾತೆ ನಡೆಸುತ್ತಿದ್ದಾರೆಯೇ? ನೀವು ಹಾಕದೇ ಇರುವ ಪೋಸ್ಟ್ ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸುತ್ತಿದೆಯೇ? ಇದಕ್ಕಾಗಿ ಫೇಸ್‌ಬುಕ್‌ಗೆ ದೂರು ನೀಡಲು https://www.facebook.com/hacked ಎಂಬಲ್ಲಿಗೆ ಹೋಗಿ. ಅಲ್ಲಿ ಕಂಡು ಬರುವ ಸಾಧ್ಯತೆಗಳನ್ನು ಟಿಕ್ ಗುರುತು ಮಾಡಿ, ಫೇಸ್‌ಬುಕ್‌ಗೆ ಸಲ್ಲಿಸಿಬಿಡಿ. ಅದಕ್ಕೂ ಮುಖ್ಯವಾಗಿ ಆಗಾಗ್ಗೆ ನಿಮ್ಮ ಪಾಸ್‌ವರ್ಡ್ ಬದಲಿಸುತ್ತಾ ಇರುವುದು ಅತ್ಯಂತ ಮುಖ್ಯ. ಎಷ್ಟೇ ಎಚ್ಚರಿಕೆ ವಹಿಸಿದರೂ ಒಂದು ಕ್ಷಣದ ಅಸಡ್ಡೆಯು ಅವಾಂತರಕ್ಕೆ ಕಾರಣವಾಗಬಹುದು.
ಇವನ್ನೂ ನೋಡಿ
ಮನೆ ಮನೆಯಲ್ಲೂ Wi-Fi Router: ಏನಿದರ ಪ್ರಯೋಜನ?
Wi-Fi Router: ಮನೆಮನೆಗಳಲ್ಲಿ ಸ್ಮಾರ್ಟ್ ಸಾಧನಗಳ ಬಳಕೆ ಹೆಚ್ಚಾದಂತೆ ಅಂತರಜಾಲ ಸಂಪರ್ಕದ ಅನಿವಾರ್ಯತೆಗಳು ಕೂಡ ಹೆಚ್ಚಾಗತೊಡಗಿವೆ. ಪರಿಣಾಮವಾಗಿ ಈಗ ಮನೆಗಳಲ್ಲಿ ಬ್ರಾಡ್ಬ್ಯಾಂಡ್ ಬಳಕೆಯೂ ವೃದ್ಧಿಯಾಗಿದೆ. ವೈರ್ ಮೂಲಕ ಬರುವ ಅಂತರಜಾಲ ವ್ಯವಸ್ಥೆಯನ್ನು ಮನೆಯೊಳಗಿರುವ ಎಲ್ಲ ಸ್ಮಾರ್ಟ್ ಸಾಧನಗಳಿಗೆ ಸಂಪರ್ಕಿಸಿದರೆ ಕೆಲಸ ಸುಲಭವಾಗುತ್ತದೆ. ಇಂಥ ಸನ್ನಿವೇಶದಲ್ಲಿ ನಾವು ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿರುವ ಶಬ್ದವೇ ವೈಫೈ ರೌಟರ್ ಅಥವಾ ರೂಟರ್.