ಅವರು ಅದೆಲ್ಲಿಂದಲೋ ಬರುತ್ತಾರೆ, ಅತ್ಯಂತ ಆತ್ಮೀಯರಾಗುತ್ತಾರೆ… ಮನಸ್ಸಿಡೀ ಆವರಿಸಿಬಿಡುತ್ತಾರೆ… ಆಕೆ/ಆತ ನಮ್ಮ ಬದುಕನ್ನೇ ಬದಲಾಯಿಸಿ ಬಿಡುತ್ತಾರೆ. ಪ್ರೀತಿಯ ಧಾರೆ ಸುರಿಸುತ್ತಾರೆ.
ನಮ್ಮ ಜೀವನಶೈಲಿಯನ್ನು, ನಮ್ಮ ಯೋಚನಾ ಲಹರಿಯನ್ನು, ನಮ್ಮ ಹವ್ಯಾಸವನ್ನು, ನಮ್ಮ ದೃಷ್ಟಿಕೋನವನ್ನು, ನಮ್ಮ ಜಾಗೃತ ಪ್ರಜ್ಞೆಯನ್ನು… ಇನ್ನೂ ಏನೇನನ್ನೋ… ಎಲ್ಲವನ್ನೂ ಬದಲಾಯಿಸಿಬಿಡುತ್ತಾರೆ. ಅಷ್ಟರಮಟ್ಟಿಗೆ ನಮ್ಮನ್ನವರು ಆವರಿಸಿಕೊಳ್ಳುತ್ತಾರೆ.
ಕೊನೆಗೊಂದು ದಿನ,ಏನು ಡಿಯರ್… ನೀನು ಹಿಂದಿನಂತಿಲ್ಲ…. ತುಂಬಾ ಬದಲಾಗಿಬಿಟ್ಟಿದ್ದೀಯಾ…
ಅಂತ ಎಲ್ಲವನ್ನೂ ನಮ್ಮ ಮೇಲೇ ಹೊರಿಸಿ bye bye ಅಂದುಬಿಟ್ಟರೆ?
ಕಣ್ಣುಗಳು ತುಂಬಿ ಬಂದವು…
ಸಿಂಧು
ನನ್ನ ಬ್ಲಾಗಿಗೆ ಸ್ವಾಗತ.
ನೋವುಗಳನ್ನು ಮನಸ್ಸಿನಿಂದ ತೆಗೆದು ಬ್ಲಾಗಲ್ಲಿ ಹಾಕಿ ಬಾಗಿಲು ಹಾಕುವುದರಿಂದ ಒಂದಷ್ಟು ಸಮಾಧಾನ.
ಅದು ಹಂಗೆ ಅಲ್ವಾ..
ನಾವು ನಮ್ಮನ್ನೂ ಮರೆಯುವಷ್ಟು ಕವಿದ ಅವರು ಹೋಗುವಾಗ ಬರಿ ಕೈಯಲ್ಲಿ ಹೋಗೋಲ್ಲಾ..ಅವರೊಡನೆ ನಮ್ಮ ಅವರ ಜೊತೆ ಕಳೆದ ಕನಸುಗಳ ಕಳೇಬರ ಹೊತ್ತುಕೊಂಡು ಹೋಗ್ತಾರೆ..
ಅದರೂ ಪಾಪಿ ಹೃದಯ..ಇನ್ನೂ ಮರುಗುತಲೇ ಇರುತ್ತೆ..
ಶಿವ್ ಅವರೆ,
ಹೋಗೋರು ಹೋಗ್ಲಿ, ಕನಸುಗಳ ಕಳೇಬರಕ್ಕಿಂತಲೂ ನೆನಪುಗಳನ್ನೇ ಹೊತ್ತೊಯ್ಯಬಾರದೇ?