ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಹಾಗೂ ನಮ್ಮ ಸ್ಮಾರ್ಟ್ ಫೋನ್ ನಡುವೆ ಫೈಲುಗಳನ್ನು ಪರಸ್ಪರ ವರ್ಗಾಯಿಸಿಕೊಳ್ಳಲು, ಯುಎಸ್‌ಬಿ ಕೇಬಲ್ ಬೇಕೂಂತೇನೂ ಇಲ್ಲ. ಬ್ಲೂಟೂತ್ ಎಂಬ ವ್ಯವಸ್ಥೆಯ ಮೂಲಕವೂ ಸಾಧ್ಯ ಎಂಬುದು ಕೆಲವರಿಗೆ ತಿಳಿದಿಲ್ಲ. ಇದಕ್ಕಾಗಿ, ಮೊಬೈಲ್‌ನಲ್ಲಿ ಬ್ಲೂಟೂತ್ ಆನ್ ಮಾಡಿ, ಕಂಪ್ಯೂಟರಿನಲ್ಲಿ ಕಂಟ್ರೋಲ್ ಪ್ಯಾನೆಲ್‌ನಲ್ಲಿ ಡಿವೈಸಸ್ ಎಂದಿರುವಲ್ಲಿ ಬ್ಲೂಟೂತ್ ಕ್ಲಿಕ್ ಮಾಡಿದಾಗ, ಪಕ್ಕದಲ್ಲಿರುವ, ಬ್ಲೂಟೂತ್ ಆನ್ ಇರುವ ಸಾಧನಗಳ ಪಟ್ಟಿಯನ್ನು ತೋರಿಸುತ್ತದೆ. ನಿಮ್ಮ ಮೊಬೈಲ್ ಸಾಧನವನ್ನು ಕ್ಲಿಕ್ ಮಾಡಿ ಪೇರ್ ಬಟನ್ ಒತ್ತಿ. ಒಂದು ಪಿನ್ ಸಂಖ್ಯೆ ಕಾಣಿಸುತ್ತದೆ. ಮೊಬೈಲಲ್ಲೂ ಅದೇ ಕಾಣಿಸುತ್ತದೆಯೇ ಎಂದು ನೋಡಿ ಎರಡೂ ಕಡೆ ಅಕ್ಸೆಪ್ಟ್ ಬಟನ್ ಕ್ಲಿಕ್ ಮಾಡಿ. ಇನ್ನು ಯಾವುದೇ ಫೈಲನ್ನು ರೈಟ್ ಕ್ಲಿಕ್ ಮಾಡಿ, Through Bluetooth ಎಂಬ ಆಯ್ಕೆ ಬಳಸಿದಾಗ, ನಿಮ್ಮ ಮೊಬೈಲ್ ಹೆಸರು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ಫೈಲ್ ಕಳುಹಿಸಿ.
ಇವನ್ನೂ ನೋಡಿ
ಸೈಬರ್ ಕೆಫೆಗಳಲ್ಲಿ ಕಂಪ್ಯೂಟರ್ ಬಳಸುವ ಮುನ್ನ ಇದನ್ನು ಓದಿ
ತಂತ್ರಜ್ಞಾನದ ಪ್ರಗತಿಯ ಭರದಲ್ಲಿ ನಮ್ಮ ಪ್ರೈವೆಸಿಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಲು ಬಹುಶಃ ನಮಗೆ ಸಮಯ ಸಾಲುತ್ತಿಲ್ಲ. ನಮ್ಮದೇ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇದ್ದರೆ ಅಷ್ಟೇನೂ ಸಮಸ್ಯೆಯಾಗಲಾರದು. ಆದರೆ, ಸೈಬರ್ ಕೆಫೆ/ಕಂಪ್ಯೂಟರ್ ಸೆಂಟರ್,...