ಎಲ್ಲೆಲ್ಲೂ ಇ-ಮೇಲು, ಆ ಮೇಲು…!

6
1098

ಪ್ರತ್ಯೇಕತೆಯ ಪರಮಾವಧಿ: ಕಂಪ್ಯೂಟರ್ ಎದುರು ಅಕ್ಕಪಕ್ಕದಲ್ಲೇ ಕೂತಿದ್ದರೂ ಪರಸ್ಪರ ಸಂಪರ್ಕಕ್ಕೆ ಇ-ಮೇಲ್ ಬಳಸುವುದು.
AISHAAAAAA!ಹೇಡಿತನದ ಪರಾಕಾಷ್ಠೆ: ಇಬ್ಬರು ಇ-ಮೇಲ್ ಮೂಲಕವೇ ಜಗಳ ಮಾಡುವುದು.
ಅಸಹಾಯಕತೆಯ ಪರಮಾವಧಿ: ಒಂದು ವಾರವಾದರೂ ಒಂದೇ ಒಂದು ಇ-ಮೇಲ್ ಬಾರದಿರುವುದು.
ಹತಾಶೆಯ ಪರಮಾವಧಿ: ಇ-ಮೇಲ್ ಸರ್ವರ್ ಡೌನ್ (ಸ್ಲೋ) ಆದಾಗ.
ನಿರ್ಲಕ್ಷ್ಯದ ಪರಮಾವಧಿ: ಪ್ರೇಮ ಸಂದೇಶದ ಇ-ಮೇಲ್ ಬರೆದು 'ಸೆಂಡ್ ಆಲ್' ಕ್ಲಿಕ್ ಮಾಡುವುದು.
ಸಾಧನೆಯ ಪರಮಾವಧಿ: ಫ್ರೆಂಡ್‌ಶಿಪ್‌ಗಾಗಿ ಹುಡುಗಿಯೊಬ್ಬಳಿಗೆ ಕಳುಹಿಸಿದ ಇ-ಮೇಲ್‌ಗೆ ರಿಪ್ಲೈ ಬರುವುದು.
ಟೈಂ ಪಾಸ್‌ನ ಪರಮಾವಧಿ: ತನ್ನದೇ ಅಡ್ರಸ್‌ಗೆ ಇ-ಮೇಲ್ ಕಳುಹಿಸುವುದು.
ನಿರೀಕ್ಷೆಯ ಪರಮಾವಧಿ: ಬಡವರಿಗೆ ಒಳಿತಾಗುವಂತಹ ಯೋಜನೆಗಳನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಇ-ಮೇಲ್ ಮಾಡುವುದು.
ಪುನರಾವರ್ತನೆಯ ಪರಮಾವಧಿ: ನೀವು ಫಾರ್ವರ್ಡ್ ಮಾಡಿದ ಇ-ಮೇಲ್ ಮತ್ತೊಬ್ಬರ ಮೂಲಕ ನಿಮ್ಮದೇ ಇನ್‌ಬಾಕ್ಸಿಗೆ ಬಂದು ಬೀಳುವುದು.
ಇಂಟರ್ನೆಟ್ ಗೀಳಿನ ಪರಮಾವಧಿ: ನೀವು ಈಜುಕೊಳದಲ್ಲಿ ಈಜುತ್ತಿರುವಾಗ ನೀರಿನಲ್ಲಿ ಮುಳುಗುತ್ತೀರಿ. ಆಗ "HELP" ಎಂದು ಕೂಗುವ ಬದಲು "F1 F1 F1" ಎಂದು ಬೊಬ್ಬಿಡುವುದು.

6 COMMENTS

  1. ಶ್ರೀನಿವಾಸ್, ನನ್ನದೊಂದು ಪುಟ್ಟ ಜಾಲಕ್ಕೆ ನಿಮಗೆ ಸ್ವಾಗತ. ಭೇಟಿ ನೀಡಿದ್ದಕ್ಕೆ ತುಂಬಾ ಥ್ಯಾಂಕ್ಸ್.
    ಅಂದಹಾಗೆ, ಅಲ-ಮೇಲು ಅಂತ ಬೊಬ್ಬಿಡುತ್ತಾರೆ. ತಕ್ಷಣ ಅವರೆಲ್ಲಿದ್ದಾರಂತ ಗೊತ್ತಾಗುತ್ತದೆ.

  2. ಇದು ಜನಾ ಬದಲಾವಣೆ ಬಯಸ್ತಾರಲ್ಲಾ… ಅದರ ಪರಮಾವಧಿ ವಿಶ್ವನಾಥರೆ.

  3. ಬ್ಲಾಗಿಗೆ ಭೇಟಿ ಇತ್ತು ಕಾಮೆಂಟ್ ಉಳಿಸಿದ್ದಕ್ಕೆ ಧನ್ಯವಾದ ಎಚ್.ಪಿ. ಅವರೆ.
    ಆಗಾಗ ಬರುತ್ತಾ ಇರಿ.

LEAVE A REPLY

Please enter your comment!
Please enter your name here