ಈ ಹಿಂದೆ ಏಪ್ರಿಲ್ 1ರಂದು google.com ಬದಲಾಗಿ ಉಲ್ಟಾ ಬರೆದರೆ (com.google), ನೀವು ಬರೆದ ಏನನ್ನೇ ಆದರೂ ಉಲ್ಟಾ ಆಗಿ ಸರ್ಚ್ ಮಾಡಿ ತೋರಿಸುವಂತಹಾ ತಾಣವನ್ನು ಗೂಗಲ್ ಇಂಟರ್ನೆಟ್‌ನಲ್ಲಿ ಹರಿಯಬಿಟ್ಟಿತ್ತು. ಇದೇ ಮಾದರಿಯಲ್ಲಿ ಮತ್ತೊಂದು ಮನರಂಜನೆ. ಗೂಗಲ್ ಸರ್ಚ್ ಎಂಜಿನ್ ತೆರೆಯಿರಿ. tilt ಅಂತ ಬರೆದು ಸರ್ಚ್ ಮಾಡಿ. ನಿಮ್ಮ ಸ್ಕ್ರೀನ್ ಟಿಲ್ಟ್ ಆದಂತೆ (ಓರೆಯಾಗಿ ವಾಲಿದಂತೆ) ಕಾಣಿಸುತ್ತದೆ. ಇದು ಗೂಗಲ್ ಎಂಜಿನಿಯರ್‌ಗಳು ಮನರಂಜನೆಗಾಗಿಯೇ ಮಾಡಿದ ಕೆಲಸ. ಇನ್ನು ಮೊದಲ ಲಿಂಕ್ ಕಾಣಸಿಗುತ್ತದೆಯಲ್ಲ, ಅದನ್ನು http://elgoog.im/tilt/ ಕ್ಲಿಕ್ ಮಾಡಿ. ಅದರಲ್ಲಿ ಯಾವುದೇ ಪದವನ್ನು ಟೈಪ್ ಮಾಡಿ ಹುಡುಕಿ. ಉಲ್ಟಾ ಸರ್ಚ್ ಮಾಡಿ ತೋರಿಸುತ್ತದೆ.
ಇವನ್ನೂ ನೋಡಿ
ಬಡಗು ತಿಟ್ಟಿನ ರಂಗಸ್ಥಳದಲ್ಲಿ ಲೀಲಾ ಬೈಪಾಡಿತ್ತಾಯ
ಯಕ್ಷಗಾನ ಕ್ಷೇತ್ರದಲ್ಲಿ ಪ್ರಮುಖ ಹೆಸರು ನನ್ನಮ್ಮ ಲೀಲಾ ಬೈಪಾಡಿತ್ತಾಯ. ಮೂಲತಃ ತೆಂಕು ತಿಟ್ಟಿನವರಾದರೂ, ಬಡಗು ಯಕ್ಷಗಾನ ರಂಗಸ್ಥಳದಲ್ಲಿ ಅವರು (ಶ್ರೀಕೃಷ್ಣ ಪಾರಿಜಾತ ಪ್ರಸಂಗ) ಭಾವಪೂರ್ಣವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಮದ್ದಳೆಯಲ್ಲಿ ನಮ್ಮ ತಂದೆ ಹರಿನಾರಾಯಣ ಬೈಪಾಡಿತ್ತಾಯ, ಚೆಂಡೆಯಲ್ಲಿ ತೆಂಕು-ಬಡಗಿನ ನುಡಿತಗಳನ್ನು ಕರಗತ ಮಾಡಿಕೊಂಡಿರುವ ಶಿವಾನಂದ ಕೋಟ. ಇದು 2015ರಲ್ಲಿ ಕಾರ್ಕಳದಲ್ಲಿ ಯಕ್ಷ ಚಂದ್ರಿಕೆ ಶಶಿಕಾಂತ ಶೆಟ್ಟರು ಆಯೋಜಿಸಿದ ಆಟ.