ಸ್ಮಾರ್ಟ್ ಫೋನ್ ಹುಟ್ಟಿದ ಒಂದು ಇತಿಹಾಸದ ಸುತ್ತ-ಮುತ್ತ
1973
ಮೋಟೋರೋಲ ಅಧಿಕಾರಿ ಮಾರ್ಟಿನ್ ಕೂಪರ್ ಅವರ ಕನಸಿನ ಕೂಸು ಮೊಬೈಲ್ ಫೋನ್. ಪ್ರಾಯೋಗಿಕವಾಗಿ ಮೊಬೈಲ್ ಫೋನ್ ಕರೆ ಮಾಡಿದ್ದು ಇದೇ ವರ್ಷ.
1983
ಜಗತ್ತಿನ ಮೊದಲ ಮೊಬೈಲ್ ಫೋನ್ ಅನ್ನು ಬಿಡುಗಡೆ ಮಾಡಿದ್ದು ಮೋಟೋರೋಲ. ಅದರ ಹೆಸರು DynaTAC 8000X. ತೂಕ 785 ಗ್ರಾಂ. ಬೆಲೆ 4000 ಡಾಲರ್.
1989
790 ಗ್ರಾಂ ತೂಕದ MicroTAC 9800X ಹೆಸರಿನೊಂದಿಗೆ ಮೊದಲ ಫ್ಲಿಪ್ ಫೋನ್ ಬಂತು.
1992
ಒಂದು ಕೈಯಲ್ಲಿ ಹಿಡಿಯಬಹುದಾದ ಮೊದಲ ಡಿಜಿಟಲ್ ಫೋನ್ ಮೋಟೋರೋಲ ಇಂಟರ್‌ನ್ಯಾಷನಲ್ 3200 ಬಂದಿದ್ದು ಈ ವರ್ಷ
1992
ನೋಕಿಯಾ 1011 ಮೊದಲ ಜಿಎಸ್ಎಂ ಮೊಬೈಲ್ ಫೋನ್. ಬೆಲೆ 234 ಪೌಂಡ್. ನಂತರ 1994ರಲ್ಲಿ 2110 ಎಂಬ ಫ್ಲ್ಯಾಗ್‌ಶಿಪ್ ಮಾಡೆಲ್ ಮಾರುಕಟ್ಟೆಗೆ ಇಳಿಯಿತು.
1994
ಐಬಿಎಂ ಸೈಮನ್ ಎಂಬುದು ಸಾಫ್ಟ್‌ವೇರ್ ಅಪ್ಲಿಕೇಶನ್ (ಆ್ಯಪ್) ಬಳಸಿದ ಮೊದಲ ಮೊಬೈಲ್ ಫೋನ್, ಸ್ಟೈಲಸ್, ಟಚ್ ಸ್ಕ್ರೀನ್ ಕೂಡ ಇತ್ತು. ಬೆಲೆ 899 ಡಾಲರ್.
1996
ನೋಕಿಯಾ ಕಮ್ಯುನಿಕೇಟರ್ ಸರಣಿಯ ಸ್ಮಾರ್ಟ್‌ಫೋನ್, ಎಲ್‌ಸಿಡಿ ಸ್ಕ್ರೀನ್, ಕ್ವೆರ್ಟಿ ಕೀಬೋರ್ಡ್ ಜತೆಗೆ ಬಂತು.
1996
ಮೋಟೋರೋಲದ ಸ್ಟಾರ್‌ಟ್ಯಾಕ್ ಫೋನ್ ಫ್ಲಿಪ್ ಮೊಬೈಲ್ ಫೋನ್, 6 ಕೋಟಿ ಮಾರಾಟ ಕಂಡಿತು.
2000
ಎರಿಕ್ಸನ್ ಆರ್380 ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಸರಲ್ಲಿ ಮಾರುಕಟ್ಟೆಗೆ ಇಳಿಯಿತು. ಹೊಸ ಸಿಂಬಿಯಾನ್ ಒಎಸ್ ಬಳಸಿದ ಮೊದಲ ಫೋನ್.
2000
3310 ಮಾಡೆಲ್‌ನ ಫೋನ್ ನೋಕಿಯಾ ಕಂಪನಿಯನ್ನು ಮೊಬೈಲ್ ಮಾರುಕಟ್ಟೆಯ ಮೇಲೆ ಅಗ್ರಸ್ಥಾನಿಯಾಗಿ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿತು.
2002
ಮಲ್ಟಿಟಾಸ್ಕಿಂಗ್ ಹಾಗೂ ಇಮೇಲ್ ಕಳುಹಿಸಲು ನೆರವಾಗುವ ಪಾಮ್ ಟ್ರಿಯೋ ಫೋನುಗಳು ಮಾರುಕಟ್ಟೆಗೆ ಬಂದವು.
2002
ಮೊದಲ ಕ್ಯಾಮೆರಾ ಫೋನ್‌ಗಳು ಬಂದಿದ್ದು ಸಾನ್ಯೋ ಎಸ್‌ಸಿಪಿ-5300 ಮೂಲಕ.
2003
ನೋಕಿಯಾ 1100 ಫೋನ್‌ಗಳು ಆ ಕಂಪನಿಯ ಸಾರ್ವಕಾಲಿಕ ಗರಿಷ್ಠ ಮಾರಾಟವಾದ ಮೊಬೈಲ್ ಫೋನ್‌ಗಳು.
2007
ಆ್ಯಪಲ್ ಐಫೋನ್ ಮಾರುಕಟ್ಟೆಗೆ ಬಂದಿರುವುದರೊಂದಿಗೆ ಸ್ಮಾರ್ಟ್ ಫೋನ್ ಯುಗಕ್ಕೆ ವೇಗ ದೊರೆಯಿತು.
2010
ಸ್ಯಾಮ್ಸಂಗ್‌ನ ಗ್ಯಾಲಕ್ಸಿ ಎಸ್ ಆಂಡ್ರಾಯ್ಡ್ ಫೋನ್‌ಗಳು ಆ್ಯಪಲ್‌ಗೆ ಸ್ಫರ್ಧೆಯೊಡ್ಡಲಾರಂಭಿಸಿದವು.
1995
ಭಾರತದಲ್ಲಿ ಮೊದಲ ಬಾರಿಗೆ ಸೆಲ್ ಫೋನ್ ಮತ್ತು ಸೇವೆ ಆರಂಭವಾದ ವರ್ಷ.