ನಿಮ್ಮ ಕಂಪ್ಯೂಟರಿನಲ್ಲಿ ಏನೋ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯ ನಿವಾರಣೆಗೆ ನಿಮ್ಮ ಸ್ನೇಹಿತರು ಅಥವಾ ದೂರದಲ್ಲಿರುವ ಕಂಪ್ಯೂಟರ್ ತಜ್ಞರಿಗೆ ಇದನ್ನು ವಿವರಿಸಬೇಕು. ಆದರೆ, ಯಾವ ಹಂತದಲ್ಲಿ ಏನಾಗುತ್ತಿದೆ ಎಂದು ವಿವರಿಸಿ ಹೇಳಲು ನಿಮಗೆ ಗೊತ್ತಾಗುತ್ತಿಲ್ಲ. ಬದಲಾಗಿ, ಏನಾಗುತ್ತಿದೆ ಎಂಬುದನ್ನು ರೆಕಾರ್ಡ್ ಮಾಡಿ, ಆ ಫೈಲನ್ನು ಕಳುಹಿಸಿದರೆ? ಇದಕ್ಕಾಗಿ ಕೀಬೋರ್ಡ್‌ನಲ್ಲಿ ವಿಂಡೋಸ್ ಬಟನ್ ಒತ್ತಿ, ಅಥವಾ Start ಎಂಬಲ್ಲಿ ಕ್ಲಿಕ್ ಮಾಡಿ, Search programs and files ಎಂದು ಬರೆದಿರುವ ಸರ್ಚ್ ಬಾಕ್ಸ್‌ನಲ್ಲಿ problem step recorder ಅಂತ ಸರ್ಚ್ ಮಾಡಿದಾಗ, Record Steps to reproduce a problem ಅನ್ನೋದನ್ನ ಕ್ಲಿಕ್ ಮಾಡಿ, ರೆಕಾರ್ಡ್ ಮಾಡಿ. ಕಾಮೆಂಟ್ ಕೂಡ ಸೇರಿಸಬಹುದು. ಏನು ಮಾಡಿದಾಗ ಏನು ಆಯಿತು ಎಂಬ ಸಮಗ್ರ ವಿವರವಿರುವ ಆ ಝಿಪ್ ಫೈಲನ್ನು ಕಳುಹಿಸಿ.
ಇವನ್ನೂ ನೋಡಿ
ಆಪಲ್ Vs ಸ್ಯಾಮ್ಸಂಗ್ : ಪಾಲುದಾರರ ಮಧ್ಯೆ ಪೇಟೆಂಟ್ ಸಂಘರ್ಷ
ಜಗತ್ತಿನ ಪ್ರಮುಖ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳಾದ ಆ್ಯಪಲ್ ಹಾಗೂ ಸ್ಯಾಮ್ಸಂಗ್ ನಡುವಿನ ಪೇಟೆಂಟ್ ಯುದ್ಧ ಇಂದು-ನಿನ್ನೆಯದಲ್ಲ. ಸ್ಯಾಮ್ಸಂಗ್ ಕಂಪನಿಯು ಯಾವಾಗ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಹಾಗೂ ಟ್ಯಾಬ್ಲೆಟ್ಗಳನ್ನು ತಯಾರಿಸಲು ಆರಂಭಿಸಿತೋ, ಆವಾಗಲೇ ಈ...



