ನಿಮಗೆ ಯಾವ ರೀತಿಯ ಆಂಡ್ರಾಯ್ಡ್ ಫೋನ್ ಬೇಕೆಂಬ ಪರಿಕಲ್ಪನೆಯಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಾವಿರಾರು ಫೋನುಗಳು, ವಿಭಿನ್ನ ವಿನ್ಯಾಸ ಹಾಗೂ ವೈಶಿಷ್ಟ್ಯಗಳೊಂದಿಗೆ ರಾಶಿಬಿದ್ದಿವೆ. ಯಾವುದನ್ನು ಖರೀದಿಸಬೇಕೆಂದು ಆಯ್ಕೆ ಮಾಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಇದಕ್ಕೆ ಗೂಗಲ್ ನೆರವಾಗಿದೆ. http://vknet.in/Phone ಪುಟದಲ್ಲಿ ಹೋಗಿ, ಏನೆಲ್ಲ ಬೇಕೆಂಬುದನ್ನು ಒಂದೊಂದಾಗಿ ಆಯ್ಕೆ ಮಾಡಿಕೊಳ್ಳುತ್ತಾ ಹೋಗಿ. ಯಾವೆಲ್ಲಾ ಆಂಡ್ರಾಯ್ಡ್ ಫೋನ್ ಮಾಡೆಲ್‌ಗಳು ಸೂಕ್ತ ಎಂಬುದನ್ನು ಈ ತಾಣವೇ ತೋರಿಸುತ್ತದೆ. ಅಲ್ಲಿಂದಲೇ ಖರೀದಿ ಮಾಡುವ ಆಯ್ಕೆಯೂ ಇದೆ. ಆದರೆ, ಕೊನೆಯಲ್ಲಿ ಕ್ಯಾರಿಯರ್ (ಮೊಬೈಲ್ ನೆಟ್‌ವರ್ಕ್ ಸೇವಾದಾರರು) ಆಯ್ಕೆ ಮಾಡಿಕೊಳ್ಳಲು ಹೇಳಲಾಗುತ್ತದೆ. ಅದು ಭಾರತಕ್ಕೆ ಸಂಬಂಧಿಸಿದ್ದಲ್ಲ. ಹೀಗಾಗಿ ಅದನ್ನು ಸ್ಕಿಪ್ ಮಾಡಿದರಾಯಿತು.
ಇವನ್ನೂ ನೋಡಿ
ಅಂಧರ ಬೆಳಕು – ಹೆಲನ್ ಕೆಲ್ಲರ್
ಗಾಢಾಂಧಕಾರದೊಳು ಅಡಿಗಡಿಗೆ ನಲುಗುತ್ತ
ನಲಿವ ಮರೆಯುತ ನೋವಿನಲೆ ಹೈರಾಣಾಗುತ್ತ ಬಳಬಳಲಿ ಬೆಂಡಾದ ದೃಷ್ಟಿಹೀನರ ಮನೆಗೆ
ಜ್ಯೋತಿಯಾದವಳಲ್ಲವೇ ಹೆಲನ್ ಕೆಲ್ಲರ್! ಶ್ರವಣ-ದೃಷ್ಟಿಯ ನೈಜ ಸಾಮರ್ಥ್ಯವರಿಯದೆ
ದಾರಿಗಾಣದೆ ಬದುಕ ಕಳೆದುಕೊಂಡವರಿಂಗೆ ಹೊಚ್ಚಹೊಸ ಬಾಳ ಕಟ್ಟಲು ನವನವೀನತೆಯ
ದಾರಿತೋರಿದ ಮಾತೆಯಲ್ಲವೆ ಹೆಲನ್ ಕೆಲ್ಲರ್! ಆನ್ನೆ ಸುಲಿವಾನ್ ಹಾಯ್ಸಿದ ಜಲ...




