ಆಂಡ್ರಾಯ್ಡ್‌ನ 5.0 ಅಂದರೆ ಲಾಲಿಪಾಪ್ ಆವೃತ್ತಿ ಕಾರ್ಯಾಚರಣಾ ವ್ಯವಸ್ಥೆಯಿರುವ ಮೊಬೈಲ್ ಫೋನ್‌ಗಳಲ್ಲಿ ಸಂದೇಶಗಳು ಅಥವಾ ನೋಟಿಫಿಕೇಶನ್‌ಗಳು, ಫೋನ್ ರಿಂಗ್ ಆಗುವ ಸದ್ದು ಇತ್ಯಾದಿಯನ್ನು ನಿರ್ದಿಷ್ಟ ಅವಧಿಗೆ ಮ್ಯೂಟ್ ಮಾಡಲು ಒಂದು ವ್ಯವಸ್ಥೆಯಿದೆ. ಏನು ಮಾಡಬೇಕೆಂದರೆ, ವಾಲ್ಯೂಮ್ ಕೀಲಿ ಒತ್ತಿದಾಗ, ಮೇಲ್ಭಾಗದಲ್ಲಿ None, Priority, All ಎಂಬ ಮೂರು ಆಯ್ಕೆಗಳು ದೊರೆಯುತ್ತವೆ. ಮೊದಲನೆಯ ಎರಡು ಆಯ್ಕೆಗಳನ್ನು ಒತ್ತಿದಾಗ, ಎಷ್ಟು ಕಾಲ ನಿಶ್ಶಬ್ಧವಾಗಿರಬೇಕು ಎಂದು ನಾವೇ ಆಯ್ಕೆ ಮಾಡಿಕೊಳ್ಳಬಹುದು. ನಾವು ನಿಗದಿಪಡಿಸಿದ ಸಮಯ ಕಳೆದ ಬಳಿಕ, ನೋಟಿಫಿಕೇಶನ್ ಅಥವಾ ಕರೆ ಬಂದಾಗ ಫೋನ್ ಸದ್ದು ಮಾಡಲಾರಂಭಿಸುತ್ತದೆ.
ಇವನ್ನೂ ನೋಡಿ
ಇ-ಮೇಲ್ ಖಾತೆ ನಿಮಗೇಕೆ ಅಗತ್ಯ?
ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ 30-- 01-ಏಪ್ರಿಲ್-2013ಹಿಂದೆಲ್ಲಾ ಪತ್ರ ಬರೆದು ಅಂಚೆ ಕಚೇರಿಗೆ ಹೋಗಿ ಡಬ್ಬಕ್ಕೆ ಹಾಕಿ ಮೂರ್ನಾಲ್ಕು ದಿನ ಕಾದ ಬಳಿಕ ಸಂದೇಶ ರವಾನೆಯಾಗುತ್ತಿತ್ತು. ಈ ಕ್ಷಿಪ್ರ ಯುಗದಲ್ಲಿ ಪತ್ರ ಬರೆದು ಮುಗಿಸಿದಾಕ್ಷಣ...