ಇನ್ನು ಮುಂದೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಸಂವಹನ ನಡೆಸಲು ಫೇಸ್‌ಬುಕ್ ತಾಣಕ್ಕೇ ಲಾಗಿನ್ ಆಗಬೇಕಾಗಿಲ್ಲ ಅಥವಾ ಸ್ಮಾರ್ಟ್ ಫೋನನ್ನೇ ನೆಚ್ಚಿಕೊಳ್ಳಬೇಕಾಗಿಲ್ಲ. ಈ ಮೆಸೆಂಜರ್‌ನ ವೆಬ್ ಆವೃತ್ತಿಯನ್ನು ಫೇಸ್‌ಬುಕ್ ಬಿಡುಗಡೆಗೊಳಿಸಿದೆ. ಅಂದರೆ, ಕಂಪ್ಯೂಟರಿನಲ್ಲಿ ಯಾವುದಾದರೂ ಬ್ರೌಸರ್ ಮೂಲಕವೇ ಫೇಸ್‌ಬುಕ್ ಖಾತೆಗೆ ಲಾಗಿನ್ ಆಗುವ ಮೂಲಕ ನೀವು ಚಾಟ್ ನಡೆಸಬಹುದಾಗಿದೆ. Messenger.com ಎಂದು ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ ಟೈಪ್ ಮಾಡಿ, ಲಾಗಿನ್ ಐಡಿ, ಪಾಸ್‌ವರ್ಡ್ ಮೂಲಕ ಒಳ ಹೊಕ್ಕರೆ ಸಾಕು. ಕಂಪ್ಯೂಟರಿನಿಂದಲೇ ಫೇಸ್‌ಬುಕ್ ಮಾತುಕತೆ ಮುಂದುವರಿಸಬಹುದು.
ಇವನ್ನೂ ನೋಡಿ
ವಿಂಡೋಸ್ ಎಕ್ಸ್ಪಿ ಇರುವವರು ಗಮನಿಸಿ!
ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಏಪ್ರಿಲ್ 21, 2014ಬಹುತೇಕ ಮಂದಿ ತಮ್ಮ ಕಂಪ್ಯೂಟರ್ನಲ್ಲಿ ಹೊಂದಿರುವ ವಿಂಡೋಸ್ ಎಕ್ಸ್ಪಿ ಎಂಬ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ - OS) ಗೆ ಅದರ ಕಂಪನಿ ಮೈಕ್ರೋಸಾಫ್ಟ್...