ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಶಾರ್ಟ್‌ಕಟ್ ಕೀಗಳು ನಮ್ಮ ಬಹಳಷ್ಟು ಕೆಲಸಗಳನ್ನು ವೇಗವಾಗಿಸುತ್ತವೆ. ಅದರಲ್ಲಿ Alt ಮತ್ತು Tab ಕೀಗಳ ಕೆಲಸದ ಬಗ್ಗೆ ಕೆಲವರಿಗೆ ಕುತೂಹಲವಿರಬಹುದು. Alt ಒತ್ತಿಹಿಡಿದಿಟ್ಟುಕೊಂಡ ಬಳಿಕ Tab ಕೀಯನ್ನು ಒತ್ತಿದರೆ, ನಿಮ್ಮ ಕಂಪ್ಯೂಟರ್‌ನ ಸ್ಕ್ರೀನ್‌ನಲ್ಲಿ ತೆರೆದಿರುವ ಎಲ್ಲ ಪ್ರೋಗ್ರಾಂಗಳು ಗೋಚರಿಸುತ್ತವೆ. Alt ಮೇಲೆ ಒಂದು ಬೆರಳಿಟ್ಟುಕೊಂಡು, ಮತ್ತೊಂದು ಬೆರಳಿನಿಂದ ಟ್ಯಾಬ್ ಕೀಯನ್ನು ಒತ್ತುತ್ತಾ ಹೋದರೆ, ನಿರ್ದಿಷ್ಟ ಪ್ರೋಗ್ರಾಂ ಅಥವಾ ಫೈಲ್ ಮೇಲೆ ಹೈಲೈಟ್ ಆಗುತ್ತದೆ. ನಮಗೆ ಬೇಕಾದ ಪ್ರೋಗ್ರಾಂ ಮೇಲೆ ಹೈಲೈಟ್ ಆದಾಗ Tab ಕೀಲಿಯಿಂದ ಬೆರಳು ತೆಗೆದರೆ, ಅದುವೇ ಸ್ಕ್ರೀನ್‌ನಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತದೆ. ತೆರೆದಿರುವ ಮುಂದಿನ ಪ್ರೋಗ್ರಾಂಗೆ ಹೋಗಲು Alt + Tab ಹಾಗೂ ಹಿಂದಿನ ಪ್ರೋಗ್ರಾಂಗೆ ಬರಲು Alt + Shift + Tab ಒತ್ತುತ್ತಾ ಹೋದರಾಯಿತು.
ಇವನ್ನೂ ನೋಡಿ
ಫ್ಯಾಬ್ಲೆಟ್/ಟ್ಯಾಬ್ಲೆಟ್ಗೆ ಅನುಕೂಲವಿರುವ ಕನ್ನಡ ಕೀಬೋರ್ಡ್
ಇಡೀ ಕೀಲಿಮಣೆಯು ಕನ್ನಡ ವರ್ಣಮಾಲೆಯ ಅನುಕ್ರಮಣಿಕೆಯಲ್ಲಿದೆ. ಇಲ್ಲಿ ಕಗಪ, ಇನ್ಸ್ಕ್ರಿಪ್ಟ್, ಫೋನೆಟಿಕ್ (ಟ್ರಾನ್ಸ್ಲಿಟರೇಶನ್ - ಲಿಪ್ಯಂತರ) ಹೀಗೆಲ್ಲಾ ವೈವಿಧ್ಯವಿಲ್ಲ. ಸ್ವರಾಕ್ಷರಗಳೆಲ್ಲವೂ ಒಂದೇ ಕೀಲಿಯಲ್ಲಿ ಗುಂಪುಗೂಡಿವೆ. ವ್ಯಂಜನಾಕ್ಷರಗಳು ನಾವು ಕನ್ನಡ ಕಲಿಯಲಾರಂಭಿಸಿದಾಗ ಬಳಪದಲ್ಲಿ ಬರೆದಂತಹಾ ಸ್ಥಾನಗಳಲ್ಲೇ ಇವೆ. ಇದಲ್ಲದೆ, ಒತ್ತಕ್ಷರ, ಮಾತ್ರಾ ಸಂಯೋಜನೆ... ಇವೆಲ್ಲವೂ ಚಕ್ರಾಕಾರದ ಪರದೆಯಲ್ಲಿ ಕಾಣಿಸುವುದರಿಂದಲೇ ಇದಕ್ಕೆ ಸ್ವರಚಕ್ರ ಎಂದು ಹೆಸರಿಸಲಾಗಿದೆ.