ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಶಾರ್ಟ್‌ಕಟ್ ಕೀಗಳು ನಮ್ಮ ಬಹಳಷ್ಟು ಕೆಲಸಗಳನ್ನು ವೇಗವಾಗಿಸುತ್ತವೆ. ಅದರಲ್ಲಿ Alt ಮತ್ತು Tab ಕೀಗಳ ಕೆಲಸದ ಬಗ್ಗೆ ಕೆಲವರಿಗೆ ಕುತೂಹಲವಿರಬಹುದು. Alt ಒತ್ತಿಹಿಡಿದಿಟ್ಟುಕೊಂಡ ಬಳಿಕ Tab ಕೀಯನ್ನು ಒತ್ತಿದರೆ, ನಿಮ್ಮ ಕಂಪ್ಯೂಟರ್‌ನ ಸ್ಕ್ರೀನ್‌ನಲ್ಲಿ ತೆರೆದಿರುವ ಎಲ್ಲ ಪ್ರೋಗ್ರಾಂಗಳು ಗೋಚರಿಸುತ್ತವೆ. Alt ಮೇಲೆ ಒಂದು ಬೆರಳಿಟ್ಟುಕೊಂಡು, ಮತ್ತೊಂದು ಬೆರಳಿನಿಂದ ಟ್ಯಾಬ್ ಕೀಯನ್ನು ಒತ್ತುತ್ತಾ ಹೋದರೆ, ನಿರ್ದಿಷ್ಟ ಪ್ರೋಗ್ರಾಂ ಅಥವಾ ಫೈಲ್ ಮೇಲೆ ಹೈಲೈಟ್ ಆಗುತ್ತದೆ. ನಮಗೆ ಬೇಕಾದ ಪ್ರೋಗ್ರಾಂ ಮೇಲೆ ಹೈಲೈಟ್ ಆದಾಗ Tab ಕೀಲಿಯಿಂದ ಬೆರಳು ತೆಗೆದರೆ, ಅದುವೇ ಸ್ಕ್ರೀನ್‌ನಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತದೆ. ತೆರೆದಿರುವ ಮುಂದಿನ ಪ್ರೋಗ್ರಾಂಗೆ ಹೋಗಲು Alt + Tab ಹಾಗೂ ಹಿಂದಿನ ಪ್ರೋಗ್ರಾಂಗೆ ಬರಲು Alt + Shift + Tab ಒತ್ತುತ್ತಾ ಹೋದರಾಯಿತು.
ಇವನ್ನೂ ನೋಡಿ
ನಾರಿಯ ತುಮುಲ ಬಿಂಬಿಸಿದ ಶೂರ್ಪನಖಾ
ಅವಿನಾಶ್ ಬೈಪಾಡಿತ್ತಾಯ ಪ್ರತಿಯೊಬ್ಬ ನಾರಿಯ ಮನದೊಳಗೆ ಸೂಕ್ಷ್ಮ ಸಂವೇದನೆಯಿದೆ, ಅದನ್ನು ಅರಿಯುವಲ್ಲಿ ಪುರುಷ ವಿಫಲನಾದಾಗ, ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿಯಾಗಬಲ್ಲಳು ಎಂಬ...