ಸ್ಮಾರ್ಟ್‌ಫೋನ್ ಖರೀದಿಸುವಾಗ ಹೆಚ್ಚಿನವರು ಅದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಗಮನ ಹರಿಸುತ್ತಾರೆ. ಆದರೆ, ಬೇರೆಲ್ಲಾ ಒಳ್ಳೆಯ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿಯದ್ದೇ ಒಂದು ಸಮಸ್ಯೆ, ಉಳಿದೆಲ್ಲವೂ ಅದ್ಭುತವಾಗಿದೆ ಅಂತ ಅನ್ನಿಸಿದ್ದಿದೆಯೇ? ಕೇವಲ ಅದೊಂದು ವಿಚಾರಕ್ಕಾಗಿ ಮಾತ್ರ ಈ ಫೋನ್ ಖರೀದಿಸಲು ಹಿಂದೇಟು ಹಾಕಿದ್ದೀರಾ? ಒಂದು ಸರಳ ಪರಿಹಾರವೆಂದರೆ, ಬ್ಯಾಟರಿ ಬ್ಯಾಂಕ್ ಅಥವಾ ಪೋರ್ಟೆಬಲ್ ಬ್ಯಾಟರಿಯನ್ನು ಪ್ರತ್ಯೇಕವಾಗಿ ಖರೀದಿಸುವುದು. 10ಸಾವಿರ mAh ಸಾಮರ್ಥ್ಯದ ಬ್ಯಾಟರಿ ಬ್ಯಾಂಕ್ ಖರೀದಿಸಿದರೆ, ಬೇಕಾದಾಗಲೆಲ್ಲಾ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಡಿಜಿಟಲ್ ಕ್ಯಾಮರಾದ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.
ಇವನ್ನೂ ನೋಡಿ
ಏನಿದು ಟ್ಯಾಬ್ಲೆಟ್, ಫ್ಯಾಬ್ಲೆಟ್, ಸ್ಮಾರ್ಟ್‌ಫೋನ್?
ವಿಜಯ ಕರ್ನಾಟಕ ಅಂಕಣ, ಸೆಪ್ಟೆಂಬರ್ 23, 2013 ಮಾಹಿತಿ @ ತಂತ್ರಜ್ಞಾನ.ಒಂದು ವರದಿಯ ಪ್ರಕಾರ, ಟ್ಯಾಬ್ಲೆಟ್ ಮತ್ತು ಲ್ಯಾಪ್ಟಾಪ್ ಕಂಪ್ಯೂಟರುಗಳನ್ನು ಫ್ಯಾಬ್ಲೆಟ್ ಹಿಂದಿಕ್ಕಿದೆ. ಹಾಗಿದ್ದರೆ, ಬೇಸಿಕ್ ಫೋನ್, ಸ್ಮಾರ್ಟ್‌ಫೋನ್, ಫ್ಯಾಬ್ಲೆಟ್, ಟ್ಯಾಬ್ಲೆಟ್ ಎಂದರೇನು...