ಸ್ಮಾರ್ಟ್‌ಫೋನ್ ಖರೀದಿಸುವಾಗ ಹೆಚ್ಚಿನವರು ಅದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಗಮನ ಹರಿಸುತ್ತಾರೆ. ಆದರೆ, ಬೇರೆಲ್ಲಾ ಒಳ್ಳೆಯ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿಯದ್ದೇ ಒಂದು ಸಮಸ್ಯೆ, ಉಳಿದೆಲ್ಲವೂ ಅದ್ಭುತವಾಗಿದೆ ಅಂತ ಅನ್ನಿಸಿದ್ದಿದೆಯೇ? ಕೇವಲ ಅದೊಂದು ವಿಚಾರಕ್ಕಾಗಿ ಮಾತ್ರ ಈ ಫೋನ್ ಖರೀದಿಸಲು ಹಿಂದೇಟು ಹಾಕಿದ್ದೀರಾ? ಒಂದು ಸರಳ ಪರಿಹಾರವೆಂದರೆ, ಬ್ಯಾಟರಿ ಬ್ಯಾಂಕ್ ಅಥವಾ ಪೋರ್ಟೆಬಲ್ ಬ್ಯಾಟರಿಯನ್ನು ಪ್ರತ್ಯೇಕವಾಗಿ ಖರೀದಿಸುವುದು. 10ಸಾವಿರ mAh ಸಾಮರ್ಥ್ಯದ ಬ್ಯಾಟರಿ ಬ್ಯಾಂಕ್ ಖರೀದಿಸಿದರೆ, ಬೇಕಾದಾಗಲೆಲ್ಲಾ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಡಿಜಿಟಲ್ ಕ್ಯಾಮರಾದ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.
ಇವನ್ನೂ ನೋಡಿ
Google Lens: ಇದರ ಬಳಕೆ ಹೇಗೆ? ಏನು ಉಪಯೋಗ? ಇಲ್ಲಿದೆ ಸಮಗ್ರ ಮಾಹಿತಿ
ಹಲವಾರು ಕೆಲಸಗಳನ್ನು ಮಾಡಬಲ್ಲ Google Lens ಎಂಬುದು ದೃಶ್ಯ ಆಧಾರಿತ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಾರ್ಯಕ್ಷಮತೆಯುಳ್ಳ ಕಂಪ್ಯೂಟಿಂಗ್ ಸಾಮರ್ಥ್ಯದ ತಂತ್ರಜ್ಞಾನ.