ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲ ತಾಣವನ್ನು ಬಳಸುತ್ತಿರುವವರಿಗೆ, ನಿರ್ದಿಷ್ಟ ವಿಷಯವೊಂದರ ಬಗ್ಗೆ ಮೊದಲು ಟ್ವೀಟ್ ಮಾಡಿದ್ದು ಯಾರು ಅಂತ ತಿಳಿದುಕೊಳ್ಳುವ ಕುತೂಹಲವಿರಬಹುದು. ಉದಾಹರಣೆಗೆ, ಮೊನ್ನೆ ನಟ ಸಲ್ಮಾನ್ ಖಾನ್‌ಗೆ ಶಿಕ್ಷೆ ಪ್ರಕಟವಾದ ದಿನ #SalmanVerdict ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಲಕ್ಷಾಂತರ ಟ್ವೀಟ್‌ಗಳು ಹರಿದಾಡಿದವು. ಆದರೆ ಅದನ್ನು ಮೊದಲು ಪ್ರಾರಂಭಿಸಿದ್ದು ಯಾರು ಅಂತ ತಿಳಿದುಕೊಳ್ಳುವುದು ಹೇಗೆ? ಅದಕ್ಕಾಗಿಯೇ ಒಂದು ಜಾಲ ತಾಣವಿದೆ. http://ctrlq.org/first/ ಎಂಬಲ್ಲಿಗೆ ಹೋಗಿ, ಯಾವ ವಿಷಯದ ಟ್ವೀಟ್ ಬೇಕೋ ಅದನ್ನು ಟೈಪ್ ಮಾಡಿ. ಕೆಲವೇ ಕ್ಷಣಗಳಲ್ಲಿ ಅದು ಟ್ವಿಟರ್ ಡೇಟಾಬೇಸ್ ಅನ್ನು ಪರೀಕ್ಷಿಸಿ, ಫಲಿತಾಂಶವನ್ನು ನಿಮ್ಮ ಮುಂದಿಡುತ್ತದೆ.
ಇವನ್ನೂ ನೋಡಿ
ಇಂಟರ್ನೆಟ್ ಇಲ್ಲದೆ ಗೂಗಲ್ ಮೇಲ್ ಉಪಯೋಗಿಸುವುದು
ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 91- ಸೆಪ್ಟೆಂಬರ್ 1, 2014ಎಲ್ಲಾದರೂ ದೂರ ಅಂದರೆ ಇಂಟರ್ನೆಟ್ ಸಂಪರ್ಕವಿಲ್ಲದ ರಿಮೋಟ್ ಪ್ರದೇಶಕ್ಕೆ ಹೋಗಿರುತ್ತೀರಿ ಅಥವಾ ವಿಮಾನದಲ್ಲೋ, ರೈಲಿನಲ್ಲೋ ಪ್ರಯಾಣಿಸುತ್ತಿರುವಾಗ, ಪ್ರಯಾಣದ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ,...